ETV Bharat / state

ಸಂವಿಧಾನ ಬದಲಿಸಲು ಮುಂದಾದ್ರೆ ದೇಶಾದ್ಯಂತ ಆಂದೋಲನ.. ಜಿ ಪರಮೇಶ್ವರ್ ಎಚ್ಚರಿಕೆ - ಆಯವ್ಯಯದಲ್ಲಿ ಬಜೆಟ್

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ- ಬಿಜೆಪಿ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ವಾಗ್ದಾಳಿ- ಡಾ ಬಿ ಆರ್ ಅಂಬೇಡ್ಕರ್ ಬರೆದ ಸಂವಿಧಾನ ಬದಲಾವಣೆ ಮಾಡಲು ಹೊರಟರೇ ದೇಶದಲ್ಲಿ ದೊಡ್ಡ ಆಂದೋಲನದ ಎಚ್ಚರಿಕೆ

congress sc st unity convention
ಕಾಂಗ್ರೆಸ್ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ
author img

By

Published : Jan 8, 2023, 8:35 PM IST

Updated : Jan 8, 2023, 9:11 PM IST

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ

ಚಿತ್ರದುರ್ಗ: ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಲು ಹೊರಟರೇ ದೊಡ್ಡ ಆಂದೋಲನವೇ ಆಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಎಸ್ಸಿ ಮತ್ತು ಎಸ್ಟಿ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಡಿಪಾಯವಾಗಿ ಎಸ್ಸಿ, ಎಸ್ಟಿ ಸಮುದಾಯಗಳು ನಿಂತಿವೆ ಎಂದು ಹೇಳಿದರು.

ಸಂವಿಧಾನ ಬದಲಾವಣೆಗೆ ಕೈ ಹಾಕಿದ್ರೆ ಆಂದೋಲನ: ನಮ್ಮ ಸಮುದಾಯದ ವಿಚಾರಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ. ಭಾರತದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕವಾದ ಸಂವಿಧಾನವನ್ನು ಬಿಜೆಪಿಯವರು ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಒಂದು ವೇಳೆ ಸಂವಿಧಾನ ಮುಟ್ಟಿದ್ರೆ ದೇಶದಲ್ಲಿ ದೊಡ್ಡ ಆಂದೋಲನವೇ ಆಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದರು.

ಭಾರತದ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ. ದೇಶದ ಪ್ರಜಾಸತ್ತಾತ್ಮಕ ಸಂವಿಧಾನ ಇದಾಗಿದ್ದು, ಸಂವಿಧಾನ ಮುಟ್ಟಿದ್ದೇ ಆದರೆ ನಾವು ಯಾರೂ ಸುಮ್ಮನೇ ಕೂರುವುದಿಲ್ಲ. ಶೋಷಿತರ ಧ್ವನಿ ಡಾ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ರಕ್ಷಣೆಗಾಗಿ ದೀರ್ಘಕಾಲ ಹೋರಾಟ ಮಾಡುತ್ತೇವೆ, ನೆನಪಿರಲಿ ಎಂದು ತಿಳಿಸಿದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷವೂ ನಾಡಿನ ಶೋಷಿತ ಸಮಾಜದ ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಹಲವಾರು ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಜಾರಿಗೊಳಿಸಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯವನ್ನು ನಿರ್ಲಕ್ಷಿಸಿದೆ. ಬಿಜೆಪಿ ಸರ್ಕಾರ ದಲಿತ ವಿರೋಧಿ ಸರ್ಕಾರ ಎಂದು ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರು ಬಿಜೆಪಿಗೆ ಮತ ಹಾಕಬಾರದು. ಕಾಂಗ್ರೆಸ್ ಪಕ್ಷವೂ ಅಧಿಕಾರಕ್ಕೆ ಬಂದ್ರೆ ಎಸ್ಸಿ ಎಸ್ಟಿ ಸಮುದಾಯಕ್ಕೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುವುದು. ಮೀಸಲಾತಿ ನಮ್ಮ ಹಕ್ಕು. ವಸತಿ ರಹಿತ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡಲು ವಿಶೇಷ ರೂಪುರೇಷ ಸಿದ್ಧಪಡಿಸಲಾಗುವುದು. ಭೂ ರಹಿತ ಕುಟುಂಬದವರಿಗೆ ಎರಡು ಎಕರೆ ಜಮೀನನ್ನು ನೀಡಲಾಗುವುದು. ಜತೆಗೆ ಗಂಗಾ ಕಲ್ಯಾಣ ಯೋಜನೆಯನ್ನೂ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ನಿರುದ್ಯೋಗ ಯುವಕ ಯುವತಿಯರಿಗೆ ಬ್ಯಾಕ್ ಲಾಗ್ ಹುದ್ದೆ ಭರ್ತಿ ಹಾಗೂ ಸಾವಿತ್ರಿ ಬಾಯಿವಪುಲೆ ವಿದ್ಯಾ ಯೋಜನೆ ಜಾರಿ, ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವಿದ್ಯಾರ್ಥಿ ವೇತನದ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಎಸ್ಸಿ ಎಸ್ಟಿ ಸಮುದಾಯದ ಏಳ್ಗೆಗೆ ಜನಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದೆವು. 24.1% ಜನ ಸಂಖ್ಯೆಗೆ 88 ಸಾವಿರ ಕೋಟಿ ರೂ.ಗಳನ್ನು ನೀಡಿದ್ದೇವೆ. ಆದರೆ ಇಂದು ಬಿಜೆಪಿ ಸರ್ಕಾರ 21 -22ರ ಆಯವ್ಯಯದಲ್ಲಿ ಬಜೆಟ್ ಮಂಡಿಸಿದ್ದು, ನಮಗೆ ನೀಡಬೇಕಿದ್ದ ಹಣ 42 ಸಾವಿರ ಕೋಟಿ ರೂಪಾಯಿ ಹಣವನ್ನು ಇನ್ನೂ ತಲುಪಿಸಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಬೊಮ್ಮಾಯಿ ಅವರು ಕೇವಲ 28 ಸಾವಿರ ಕೋಟಿ ಮಾತ್ರ ನೀಡಿ, ಕಾನೂನಿನ ಉಲ್ಲಂಘಿಸಿದ್ದಾರೆ. ನಮ್ಮ ದಲಿತ ಜನರಿಗೆ ಮೋಸ ಮಾಡಿದ್ದೀರಿ. ಮೀಸಲಾತಿ ಹೆಚ್ಚು ಎಸ್ಸಿ ಎಸ್ಟಿಗೆ ನೀಡಿದ್ದೇವೆ ಎನ್ನುತ್ತೀರಿ. ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆ. ಮೀಸಲಾತಿ ಹೆಚ್ಚಳ ಮಾಡಿ ಎಂದರೆ ನಾವು ಮಾಡಲು ಬರೋದಿಲ್ಲ ಅನ್ನುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬಾರದು. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸಮುದಾಯದ ಏಳ್ಗೆ ಬಯಸದೇ ಇರುವವರಿಗೆ ಮತ ಹಾಕಬಾರದು ಎಂದು ಪರಮೇಶ್ವರ್​ ಕರೆ ನೀಡಿದರು.

ಇದನ್ನೂಓದಿ:ವಾರದ 3ನೇ ಭಾನುವಾರ 'ನೊಂದವರ ದಿನ': ಪೊಲೀಸರಿಂದ ದೂರುದಾರರಿಗೆ ಸ್ಪಂದಿಸುವ ಕೆಲಸ

Last Updated : Jan 8, 2023, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.