ಚಿತ್ರದುರ್ಗ: ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಡಬಲ್ ಸ್ಟಾಂಡರ್ಡ್ ಹೋರಾಟ ಮಾಡುತ್ತಿದ್ದಾರೆ. ಎಪಿಎಂಸಿ ಮುಚ್ಚಲಾಗುತ್ತದೆ ಎಂದು ಹೋರಾಟ ಮಾಡುವವರು ಕೇರಳದಲ್ಲಿ ಹೋಗಿ ಮಾಡಲಿ. ಅಲ್ಲಿ ಎಪಿಎಂಸಿಗಳೇ ಇಲ್ಲವೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗುಡುಗಿದರು.
ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಬಂದ್ ಮಾಡಿರುವ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೋಗಿ ಕೇರಳದಲ್ಲಿ ಹೋರಾಟ ಮಾಡಲಿ. ಇಲ್ಲದೆ ಇರುವ ರೈತರ ಸಮಸ್ಯೆಗಳನ್ನು ಹುಟ್ಟು ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ. ಈ ಬಜೆಟ್‌ನ ಒಂದು ಸಾವಿರ ಎಪಿಎಂಸಿಗಳಿಗೆ ಎಲೆಕ್ಟ್ರಾನಿಕ್ ರಾಷ್ಟೀಯ ಮಾರುಕಟ್ಟೆ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಎಪಿಎಂಸಿಗಳನ್ನು ಬಂದ್ ಮಾಡುವುದಿಲ್ಲ. ಅನ್ನದಾತರಿಗೆ ನ್ಯಾಯಯುತ ಬೆಲೆ ನೀಡಲು ಮುಕ್ತ ಮಾರುಕಟ್ಟೆ ಅವಕಾಶ ನೀಡಲಾಗಿದೆ ಎಂದರು.
ರೈತರ ಆದಾಯ ದ್ವಿಗುಣಕ್ಕೆ ಹದಿನಾರುವರೆ ಲಕ್ಷ ಕೋಟಿ ಬಜೆಟ್ ಕೃಷಿ ಸಾಲಕ್ಕೆ ನೀಡುವ ಗುರಿಯಿದೆ. ಅಲ್ಲದೆ ಸ್ವಾತಂತ್ರ್ಯ ನಂತರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ. 137 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಾಗುತ್ತದೆ. ದೇಶದಲ್ಲಿ ರಸ್ತೆಗಳ ಕ್ರಾಂತಿಯಾಗುತ್ತಿದೆ. ಪ್ರತಿದಿನ 31 ಕಿ.ಮೀ. ಹೆದ್ದಾರಿಗಳ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ದೇಶ ಅಭಿವೃದ್ಧಿಗೆ ಎಲ್ಲಾ ಕ್ಷೇತ್ರಕ್ಕೆ ಉತ್ತವಾದ ಬಜೆಟ್ ನೀಡಿದೆ. ಪ್ರತಿ ಮನೆಗೂ ವಿದ್ಯುತ್, ಮನೆ, ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಮೂಲಕ ಜನಪರವಾಗಿದೆ ಎಂದು ತೋರಿಸುತ್ತಿದೆ ಎಂದರು.
ಓದಿ: ಬೆಳಗಾವಿ ಐಟಿ ಪಾರ್ಕ್ಗೆ 750 ಎಕರೆ ಭೂಮಿ ಬಿಟ್ಟುಕೊಡುವಂತೆ ರಾಜನಾಥ್ಗೆ ಡಿಸಿಎಂ ಮನವಿ
ತೈಲ ಬೆಲೆ ಏರಿಕೆ ಕುರಿತಾಗಿ ಮಾತನಾಡಿ, ವಿಶ್ವಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಕೆಲವು ವ್ಯಕ್ತಿಗಳು ತೈಲ ಬೆಲೆ ಏರಿಕೆಗೆ ಬಿಜೆಪಿ ಸರ್ಕಾರಗಳು ಕಾರಣ ಎಂದು ಹೇಳುತ್ತಿದ್ದಾರೆ. ಪ್ರತಿಪಕ್ಷಗಳ ಆಡಳಿತ ವಿರುವ ರಾಜ್ಯಗಳಲ್ಲಿ ಪೆಟ್ರೋಲ್,ಡಿಸೇಲ್ ಬೆಲೆ ಕಡಿಮೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.