ಚಿತ್ರದುರ್ಗ : ಕರ್ತವ್ಯಕ್ಕೆ ಸೇರಿಸಿಕೊಳ್ಳದಿರುವ ಹಿನ್ನೆಲೆ ಪೌರ ಕಾರ್ಮಿಕನೋರ್ವ ಪುರಸಭೆ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.
ಮಂಜುನಾಥ್ ಐದು ವರ್ಷಗಳ ಹಿಂದೆ ಸ್ವಚ್ಛತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಕಳೆದ ವರ್ಷ 199 ದಿನ ಕರ್ತವ್ಯಕ್ಕೆ ಗೈರಾಗಿದ್ದರು. ಈ ಬಗ್ಗೆ ತಿಳುವಳಿಕೆ ಪತ್ರ ಕೂಡ ಕಳುಹಿಸಲಾಗಿತ್ತು. ಅಲ್ಲದೇ ಮದ್ಯ ಕುಡಿದು ಕಚೇರಿಗೆ ಬಂದು ಮೇಲಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರ್ವೇ ಸಾಮಾನ್ಯವಾಗಿತ್ತು ಎನ್ನಲಾಗಿದೆ.
ಕಚೇರಿಗೆ ಬಳಿ ಬಂದು ಮಂಜುನಾಥ್ ಕರ್ತವ್ಯಕ್ಕೆ ನೇಮಿಸಿಕೊಳ್ಳಿ ಎಂದು ಅಧಿಕಾರಿಗಳಲ್ಲಿ ಕೇಳಿದ್ದಾರೆ. ಆಗ ಅಧಿಕಾರಿಗಳು ನೀವು ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಂಡು ಬರಲು ಹೇಳಿದ್ದಾರೆ.
ಆದರೆ, ಪೆಟ್ರೋಲ್ ಸಮೇತ ಬಂದಿದ್ದ ಮಂಜುನಾಥ್ ಇಂದೇ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತೇನೆಂದು ಹೇಳಿ, ಕೂಡಲೇ ಮೈಮೇಲೆ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಜೀವಂತ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ - ವಿಡಿಯೋ ವೈರಲ್
ತಕ್ಷಣ ಅಲ್ಲಿದ್ದ ಜನರು ಬಂದು ಬೆಂಕಿ ಹಾರಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ