ಚಿತ್ರದುರ್ಗ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿ.ರಾಧಿಕಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಜಿಲ್ಲೆಯ ಖಡಕ್ ಎಸ್ಪಿ ಎಂದೇ ಹೆಸರು ಮಾಡಿದ್ದ ಡಾ.ಕೆ.ಅರುಣ್ ಅವರನ್ನು ಬೆಂಗಳೂರಿನ ಕೆಎಸ್ಆರ್‌ಪಿ 9ನೇ ಬೆಟಾಲಿಯನ್‌ಗೆ ವರ್ಗಾಯಿಸಲಾಗಿದೆ.
ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಎಸ್ಪಿ ಡಾ.ಕೆ.ಅರುಣ್ ಜಿಲ್ಲೆಯಲ್ಲಿ ಅವ್ಯಾಹತವಾಗಿದ್ದ ಮರಳು ದಂಧೆ, ವೇಶ್ಯಾವಾಟಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಂಡಿದ್ದರು.