ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಡಳಿತದ ನಿರ್ಲಕ್ಷ್ಯ ಬಯಲು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಕನಿಷ್ಠ ಸೌಲಭ್ಯವಿಲ್ಲ. ಕ್ವಾರಂಟೈನ್ ಮಾಡಲಾದ ಜನರಿಗೆ ಮಲಗುವುದಕ್ಕೆ ಬೆಡ್ ಶೀಟ್ ಇಲ್ಲ. ಇಲ್ಲಿ ನೀಡಲಾಗುವ ಊಟವೂ ಸರಿ ಇಲ್ಲ. ಎಲ್ಲರಿಗೂ ಒಂದೇ ಶೌಚಾಲಯ, ಕುಡಿಯುವ ನೀರಿನ ಪಾತ್ರೆ ಕೂಡ ಒಂದೇ ಇರಿಸಲಾಗಿದೆ ಎಂದು ಚಿತ್ರದುರ್ಗದ ಸಾಂಸ್ಥಿಕ ಕ್ವಾರಂಟೈನ್ ನ ದುಸ್ಥಿತಿಯನ್ನು ಯುವಕ ವಿಡಿಯೋ ಮೂಲಕ ತಿಳಿಸಿದ್ದಾನೆ ಅನಾವರಣ ಮಾಡಿದ್ದಾನೆ.