ETV Bharat / state

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಹೋರಾಟ : ಮಂಜೂರಾಗಿದ್ದ ಕಾಲೇಜು ಕೈ ತಪ್ಪಿದ್ದು ಹೇಗೆ ಗೊತ್ತಾ..? - ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಆಗ್ರಹ

ಚಿತ್ರದುರ್ಗ ಜಿಲ್ಲೆಗೆ ಈ ಹಿಂದೆಯೇ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ, ಜನಪ್ರತಿನಿಧಿಗಳ ಬೇಜವ್ದಾರಿಯಿಂದ ಅದು ಜಿಲ್ಲೆಯ ಕೈ ತಪ್ಪಿದೆ. ಹೀಗಾಗಿ ಮತ್ತೊಮ್ಮೆ ಜಿಲ್ಲೆಗೆ ಮೆಡಿಕಲ್ ಕಾಲೇಜ ಮಂಜೂರು ಮಾಡುವಂತೆ ಜನ ಆಗ್ರಹಿಸಿದ್ದಾರೆ.

Chitradurga people fighting for govt medical collage
ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಹೋರಾಟ
author img

By

Published : Oct 19, 2020, 8:34 PM IST

ಚಿತ್ರದುರ್ಗ : ಅಭಿವೃದ್ದಿಯ ಹಿಂದುಳಿದಿರುವ ಜಿಲ್ಲೆಗಳ ಪೈಕಿ ಚಿತ್ರದುರ್ಗವೂ ಒಂದು. ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ, ಸರಿಯಾದ ಆಸ್ಪತ್ರೆ ಸೇರಿದಂತೆ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ಇಲ್ಲ. ಇದನ್ನು ಮನಗಂಡ ಈ ಹಿಂದಿನ ಸರ್ಕಾರ, ಜಿಲ್ಲೆಗೆ ಮೆಡಿಕಲ್ ಕಾಲೇಜು ಒಂದನ್ನು ಮಂಜೂರು ಮಾಡಿತ್ತು. ಆದರೆ, ಸ್ಥಳೀಯ ಜನ ಪ್ರತಿನಿಧಿಗಳ ಬೇಜವಬ್ದಾರಿಯಿಂದ ಅದು ಈಗ ಜಿಲ್ಲೆಯ ಕೈ ತಪ್ಪಿದೆ.

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಹೋರಾಟ

ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಜಿಲ್ಲೆಯ ಆರು ತಾಲೂಕುಗಳಿಂದ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಆದರೆ, ಇಲ್ಲಿ ಕೂಡ ಜನರಿಗೆ ಸರಿಯಾದ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, 2013 ರಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿತ್ತು. ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ 14 ಎಕರೆ 3 ಗುಂಟೆ ಜಮೀನನ್ನೂ ಗುರುತಿಸಲಾಗಿತ್ತು. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಬೇಜವ್ದಾರಿಯಿಂದ ಮೆಡಿಕಲ್ ಕಾಲೇಜು ನಿರ್ಮಾಣ ಪ್ರಾರಂಭಗೊಂಡಿರಲಿಲ್ಲ. 2018-19 ರಲ್ಲಿ ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ -ಜೆಡಿಎಸ್​ ನೇತೃತ್ವದ ಸಮ್ಮಿಶ್ರ ಅಧಿಕಾರಕ್ಕೆ ಬಂದ ಬಳಿಕ, ಜನ ಪ್ರತಿನಿಧಿಗಳ ಮಸಲತ್ತಿನಿಂದ ಚಿತ್ರದುರ್ಗಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ರಾಮನಗರ ಜಿಲ್ಲೆ ಕನಕಪುರಕ್ಕೆ ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಮರು ಮಂಜೂರು ಮಾಡಲಾಗಿದೆ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಜನ ಲಕ್ಷ ಲಕ್ಷ ಫೀಸ್ ಪಾವತಿಸಿ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ ನಿರ್ಮಾಣ ಆಗಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. ಜಿಲ್ಲೆಯ ಬಡ ಜನರಿಗೆ ಉತ್ತಮ ಚಿಕಿತ್ಸೆಯೂ ಸಿಗುತ್ತಿತ್ತು. ಆದರೆ, ಜನ ಪ್ರತಿನಿಧಿಗಳ ಒಳ ರಾಜಕೀಯ ಮತ್ತು ಬೇಜಬ್ದಾರಿಯಿಂದ ಜಿಲ್ಲೆಗೆ ಮಂಜೂರಾಗಿದ್ದ ಕಾಲೇಜು ಕೈತಪ್ಪಿದೆ. ಹೀಗಾಗಿ, ಮತ್ತೊಮ್ಮೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು. ಜಿಲ್ಲೆಯ ಶಾಸಕರು ಮತ್ತು ಸಚಿವರಾಗಿರುವ ಶ್ರೀರಾಮುಲು ಈ ಬಗ್ಗೆ ಸದನದಲ್ಲಿ ಧ್ವನಿಯೆತ್ತಬೇಕು ಎಂದು ಜನ ಆಗ್ರಹಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.