ETV Bharat / state

ಹಣ ಡಬ್ಲಿಂಗ್ ಎಂದು ವಂಚಿಸಿ ಕೊಲೆ.. ಚಿತ್ರದುರ್ಗದಲ್ಲಿ ನಾಲ್ವರ ಬಂಧನ - Chitradurga murder case four accused arrested

ಹಣ ಡಬ್ಲಿಂಗ್ ಆಮಿಷ- ವಂಚನೆ, ಕೊಲೆ ಪ್ರಕರಣ- ಹೊಸದುರ್ಗ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ

chitradurga-murder-case-four-accused-arrested
ಹಣ ಡಬ್ಲಿಂಗ್ ಮಾಡಿಕೊಡುತ್ತೇವೆ ಎಂದು ವಂಚಿಸಿ ಕೊಲೆ :ನಾಲ್ವರ ಬಂಧನ
author img

By

Published : Jul 17, 2022, 5:30 PM IST

ಚಿತ್ರದುರ್ಗ : ಹಣ ಡಬ್ಲಿಂಗ್ ಮಾಡಿಕೊಡುತ್ತೇವೆ ಎಂದು ವ್ಯಕ್ತಿಯನ್ನು ನಂಬಿಸಿ, ಬಳಿಕ ವಂಚಿಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನವೀನ್, ನಾಗರಾಜ್, ನಾಗರಾಜಪ್ಪ, ಲೋಕೇಶ್ ಎಂದು ಗುರುತಿಸಲಾಗಿದೆ.

ಈ ಹಿಂದೆ ಜಿಲ್ಲೆಯ ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ ಕೀರ್ತಿರಾಜ್ ಎಂಬ ವ್ಯಕ್ತಿಯ ಕೊಲೆ ನಡೆದಿತ್ತು. ಬಳಿಕ ಮೇ 30 ರಂದು ಹೊಸದುರ್ಗ ನಿವಾಸಿ ಕೀರ್ತಿರಾಜ್ ಅವರ ಶವ ಭದ್ರಾ ಚಾನೆಲ್ ನಲ್ಲಿ ದೊರಕಿತ್ತು. ಈ ಕುರಿತು ತನಿಖೆ ನಡೆಸಿದ ಹೊಸದುರ್ಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಶಿವಣ್ಣ ಕೊಲೆಗೀಡಾಗಿರುವುದಾಗಿ ತಿಳಿದುಬಂದಿದೆ.

ಹಣ ಡಬ್ಲಿಂಗ್ ಮಾಡಿಕೊಡುತ್ತೇವೆ ಎಂದು ವಂಚಿಸಿ ಕೊಲೆ :ನಾಲ್ವರ ಬಂಧನ

ಬಂಧಿತ ಆರೋಪಿಗಳಿಂದ 2 ಬೈಕ್ ಹಾಗೂ 60 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸದುರ್ಗ ಸಿಪಿಐ ಫೈಜುಲ್ಲಾ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಗೆ ಎಸ್ಪಿ ಕೆ. ಪರಶುರಾಮ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಓದಿ : ವಂಚನೆ ಪ್ರಕರಣ: ಸ್ಯಾಂಡಲ್​ವುಡ್​ ಖ್ಯಾತ ನಟಿಯ ಸ್ನೇಹಿತ ಸೇರಿ ಇಬ್ಬರು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.