ETV Bharat / state

ಹಳ್ಳಿಯಿಂದ ದಿಲ್ಲಿಗೆ: ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿಗೆ ಕೇಂದ್ರ ಮಂತ್ರಿಭಾಗ್ಯ - Chitradurga MP A. Narayanaswamy got the Union Cabinet minister position

ನಾನೊಬ್ಬ ದಲಿತ ಮಾದಿಗ ಸಮುದಾಯದ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿದೆ.

ಎ.ನಾರಾಯಣಸ್ವಾಮಿ
A. Narayanaswamy
author img

By

Published : Jul 7, 2021, 5:31 PM IST

ಚಿತ್ರದುರ್ಗ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ಆನೇಕಲ್ ಎ.ನಾರಾಯಣಸ್ವಾಮಿ ಅವರಿಗೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿದೆ.

1957ರ ಮೇ 16 ರಂದು ಬೆಂಗಳೂರಿನ ಆನೇಕಲ್‍ನಲ್ಲಿ ಅಬ್ಬಯ್ಯ, ತಿಮ್ಮಕ್ಕ ದಂಪತಿಯ ಪುತ್ರನಾಗಿ ಜನಿಸಿದ ಎ. ನಾರಾಯಣಸ್ವಾಮಿ ಅವರು ಬಿ.ಎ ಪದವಿ ಪಡೆದಿದ್ದಾರೆ. ಇವರ ಪತ್ನಿ ವಿಜಯಲಕ್ಷ್ಮಿ. ಇವರಿಗೆ ಎ.ಎನ್.ಶೀತಲ್ ಸ್ವಾಮಿ, ಎ.ಎನ್.ಕೌಶಲ್ ಸ್ವಾಮಿ ಹಾಗೂ ಎ.ಎನ್.ಸಿರಿಷಾ ಸ್ವಾಮಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.

1966ರಲ್ಲಿ ಆನೇಕಲ್​ನಲ್ಲಿ ಮೊದಲ ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆಯಾದರು. 1997 ರಲ್ಲಿ ಪ್ರಥಮ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ 1999, 2004 ಹಾಗೂ 2008 ರಲ್ಲಿ ಶಾಸಕರಾಗಿ ಆಯ್ಕೆಯಾದರು. 2010 ರಲ್ಲಿ ಸಮಾಜ ಕಲ್ಯಾಣ ಹಾಗೂ ಬಂದೀಖಾನೆ ಸಚಿವ ಸ್ಥಾನ ನಿರ್ವಹಿಸಿದ್ದರು.

2013 ರ ವಿಧಾನಸಭೆ ಹಾಗೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರಿಂದ ಅನಿವಾರ್ಯವಾಗಿ ಅವರು 2019ರಲ್ಲಿ ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು. ಶೋಷಿತ ಮಾದಿಗ ಸಮುದಾಯದ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಅವರು, ಇತರೆ ಬಡ ಕುಟುಂಬಗಳ ಬಗ್ಗೆ ಸಹ ಕಾಳಜಿ ಹೊಂದಿದ್ದಾರೆ. ಕಷ್ಟದ ಹಾದಿಯಿಂದ ಬೆಳೆದು ಬಂದ ಅವರಿಗೆ ಇದೀಗ ಸಚಿವ ಸ್ಥಾನ ಲಭಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.