ಚಿತ್ರದುರ್ಗ : ನಗರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಬಹಳ ಅದ್ದೂರಿಯಾಗಿ ನಡೆಯಿತು. ಯಾವುದೇ ಡಿಜೆ ಸದ್ದು ಇಲ್ಲದಿದ್ದರೂ ಲಕ್ಷಾಂತರ ಜನ ಸೇರಿದ್ದರು. ಇದು ಅಚ್ಚರಿ ಮೂಡಿಸುವಂತಿತ್ತು. ಕೋಟೆನಗರ ಕೇಸರಿ ಬಣ್ಣಮಯವಾಗಿತ್ತು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ನಡೆಯುವ ಬೃಹತ್ ಶೋಭಾಯಾತ್ರೆಗೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ಜನರು ಸೇರಿದ್ದರು. ಭಗವಾ ಧ್ವಜವನ್ನು ಜೆಡಿಎಸ್ ಮುಖಂಡ ಕೆ ಸಿ ವೀರೇಂದ್ರ ಪಪ್ಪಿ 2 ಲಕ್ಷ ರೂ. ಹಾರಾಜು ಮೂಲಕ ಪಡೆದರು. ಪೊಲೀಸ್ ಸರ್ಪಗಾವಲಿನಲ್ಲಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಿತು.
ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವರ್ಷದಿಂದ ವರ್ಷಕ್ಕೆ ವಿಶೇಷ ಮೆರುಗು ಪಡೆಯುತ್ತಿದೆ. ಈ ಬಾರಿ ಜನಪದ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಗಣೇಶನನ್ನು ಬೀಳ್ಕೊಡಿಗೆ ಕೊಡಲಾಯಿತು. ನಗರದ ಚಂದವಳ್ಳಿ ಕೆರೆಯಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು.