ಚಿತ್ರದುರ್ಗ: ಸಮಾಜದ ಹಿತರಕ್ಷಣೆ ಮಾಡದೆ ಅಶಾಂತಿ ಮೂಡಿಸಿ ದುಷ್ಕೃತ್ಯ ನಡೆಸುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಪಾಂಡುರಂಗಪ್ಪ ಅವರು ರೌಡಿ ಶೀಟರ್ಗಳಿಗೆ ಎಚ್ಚರಿಕೆ ನೀಡಿದರು.
ಇಂದು ಡಿವೈಎಸ್ಪಿ ಪಾಂಡುರಂಗಪ್ಪನವರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿ ಶೀಟರ್ಗಳ ಪರೇಡ್ ನಡೆಸಿದರು. ಈ ವೇಳೆ ಸಾರ್ವಜನಿಕರ ಹಿತ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯಾವ ವ್ಯಕ್ತಿ ಸಾರ್ವಜನಿಕರಿಗೆ ತೊಂದರೆ ಮಾಡಿ ಸಮಾಜದಲ್ಲಿ ಅಹಿತಕರ ಘಟನೆಗಳನ್ನು ಸೃಷ್ಠಿ ಮಾಡುತ್ತಾರೋ ಅಂತಹ ರೌಡಿಗಳಿಗೆ ಕ್ಷಮೆ ಇಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.
ಇನ್ನೂ ಮಟ್ಕಾ ದಂಧೆ ಹಾಗೂ ಜೂಜಾಟ ನಡೆಸುವುದು ಅಪರಾಧ ಎಂದು ತಿಳಿದಿದ್ದರೂ ಕೆಲವರು ಆ ಕೆಲಸಕ್ಕೆ ಕೈ ಹಾಕಿದ್ದಾರೆ. ಇದನ್ನ ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ. ಎಚ್ಚೆತ್ತುಕೊಂಡು ಜೀವನ ನಡಸಬೇಕು. ಈ ವಿಭಾಗದ ಠಾಣೆಗಳಲ್ಲಿ ಒಟ್ಟು 347 ರೌಡಿ ಶೀಟರ್ಗಳಿದ್ದಾರೆ. ಇದರಲ್ಲಿ 117 ಜನ ಮಾತ್ರ ಹಾಜರಾಗಿದ್ದು, ಉಳಿದ 230 ಜನರನ್ನು ಎರಡು ದಿನಗಳ ಬಳಿಕ ಪರೇಡ್ ನಡೆಸಲಾಗುತ್ತದೆ ಎಂದರು.