ETV Bharat / state

ಮತಬೇಟೆಗೆ ಭದ್ರೆಯನ್ನೇ ದಾಳವಾಗಿಸಿಕೊಂಡ ಲೋಕ ಸಮರದ ಕಲಿಗಳು! - undefined

ಭದ್ರಾ ಮೇಲ್ದಂಡೆ ಯೋಜನೆಯನ್ನ ಅಸ್ತ್ರವಾಗಿಸಿಕೊಂಡು ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಧುಮುಕಿದ್ದಾರೆ.

ಪ್ರಚಾರಕ್ಕೆ ಭದ್ರಾ ಮೇಲ್ದಂಡೆ ಯೊಜನೆ ಹೆಸರು ಬಳಕೆ
author img

By

Published : Apr 4, 2019, 12:37 PM IST

Updated : Apr 4, 2019, 1:04 PM IST

ಚಿತ್ರದುರ್ಗ: ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕೈ, ಕಮಲ ಕಲಿಗಳ ನಡುವೆ ಜಿದ್ದಾಜಿದ್ದಿನ ಸೆಣಸಾಟ ಏರ್ಪಟ್ಟಿದೆ. ಅದರೆ ಲೋಕ ಸಮರದಲ್ಲಿ ಮತ ಬೇಟೆಯಾಡಲು ಅಭ್ಯರ್ಥಿಗಳು ಭದ್ರೆಯನ್ನೇ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.

ಬರದನಾಡು ಎಂದೇ ಹಣೆ ಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗದಲ್ಲಿ ಚುನಾವಣೆ ಕಾವು ಏರುತ್ತಲೇ ಇದೆ. ಲೋಕಸಭಾ ಕ್ಷೇತ್ರದ‌ ಮತದಾನಕ್ಕೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಕೈ- ಕಮಲ ಅಭ್ಯರ್ಥಿಗಳು ಭದ್ರಾ ಮೇಲ್ದಂಡೆ ಯೋಜನೆಯನ್ನ ಅಸ್ತ್ರವಾಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದ ನಾಡಿನಲ್ಲಿ ಈ ಭಾಗದ ಜನರು ಭದ್ರಾ ಯೋಜನೆಗಾಗಿ ಹೋರಾಟ‌ ನಡೆಸಿ ಯೋಜನೆಯನ್ನ ಗಿಟ್ಟಿಸಿಕೊಂಡಿದ್ದರು. ಸರ್ಕಾರಗಳಿಂದ ಕೇವಲ ಎರಡು ಸಾವಿರ ಕೋಟಿ ಅನುದಾನ ಮಾತ್ರ ಈ ಯೋಜನೆಗಾಗಿ ಖರ್ಚಾಗಿದ್ದು, ಭದ್ರಾ ಯೋಜನೆ ಕಾಮಗಾರಿ ಮಾತ್ರ ಇನ್ನು ಪೂರ್ಣವಾಗದೆ ಮಂದಗತಿಯಲ್ಲಿ ಸಾಗತೊಡಗಿದೆ.

ಆದರೂ ಈ ಭದ್ರಾ ಯೋಜನೆಯನ್ನೇ ಅಸ್ತ್ರವಾಗಿಸಿಕೊಂಡಿರೋ ಕಾಂಗ್ರೆಸ್ ಅಭ್ಯರ್ಥಿ ಸಂಸದ ಚಂದ್ರಪ್ಪ ತಾವೊಬ್ಬ ಭಗೀರಥ, ಬರದನಾಡಿನ ನೀರಿನ ಬವಣೆ ನೀಗಿಸಲು ಭದ್ರಾ ಯೋಜನೆ ತಂದ ಭದ್ರಾ ಕಾಮಗಾರಿಯ ಮೇಸ್ತ್ರಿ ಅಂತ ಪ್ರಚಾರ ಗಿಟ್ಟಿಸುವ ಮೂಲಕ ಮತ ಬೇಟೆಯಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿರೋ ಚುನಾವಣಾ ಆಯೋಗ ನೀತಿ ಸಂಹಿತೆ ‌ಉಲ್ಲಂಘನೆಯ ನೋಟಿಸ್ ಜಾರಿ ಮಾಡಿದೆ.

ಪ್ರಚಾರಕ್ಕೆ ಭದ್ರಾ ಮೇಲ್ದಂಡೆ ಯೊಜನೆ ಹೆಸರು ಬಳಕೆ

ಹೇಳಿಕೆ ಹಾಗೂ ಭದ್ರಾ ಕಾಮಗಾರಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರೋ ಕೈ ನಾಯಕರ ನಡೆಗೆ ಸಾರ್ವಜನಿಕರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಕೂಡ ಕೈ ನಾಯಕರನ್ನ ತರಾಟೆ ತೆಗೆದುಕೊಂಡಿದ್ದಾರೆ.

Intro:ಭದ್ರಾ ಮೇಲ್ದಂಡೆ ಯೋಜನೆ ದಾಳವಾಗಿಸಿಕೊಂಡ ಲೋಕ ಸಮರದ ಕಲಿಗಳು

ಚಿತ್ರದುರ್ಗ:- ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕೈ ಕಮಲ ಕಲಿಗಳ ನಡುವೆ ಜಿದ್ದಾಜಿದ್ದಿಯ ಸೆಣಸಾಟ ಏರ್ಪಟ್ಟಿದೆ. ಅದ್ರೇ
ಲೋಕ ಸಮರದಲ್ಲಿ ಮತ ಬೇಟೆಯಾಡಲು ಅಭ್ಯರ್ಥಿಗಳು ಭದ್ರೆಯನ್ನ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಅಸ್ತ್ರವಾಗಿಸಿಕೊಂಡು ಬಿಜೆಪಿ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಧುಮುಕಿದ್ದಾರೆ.

ಬರದನಾಡು ಎಂದೇ ಹಣೆ ಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗದಲ್ಲಿ ಚುನಾವಣೆ ಕಾವು ಏರುತ್ತಲೇ ಇದೇ. ಲೋಕಸಭಾ ಕ್ಷೇತ್ರದ‌ ಮತದಾನಕ್ಕೆ ದಿನಾಂಕ ನಿಗದಿಯಾದ ಬೆನ್ನಲೇ ಕೈ ಕಮಲದ ಅಭ್ಯರ್ಥಿಗಳು ಭದ್ರಾ ಮೇಲ್ದಂಡೆಯ ಯೋಜನೆಯನ್ನು ಅಸ್ತ್ರವಾಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದ ನಾಡಿನಲ್ಲಿ ಈ ಭಾಗದ ಜನರು ಭದ್ರಾ ಯೋಜನೆಗಾಗಿ ಹೋರಾಟ‌ ನಡೆಸಿ ಯೋಜನೆಯನ್ನು ಗಿಟ್ಟಿಸಿಕೊಂಡಿದ್ದರು. ಸರ್ಕಾರಗಳಿಂದ ಕೇವಲ ಎರಡು ಸಾವಿರ ಕೋಟಿ ಅನುಧಾನ ಮಾತ್ರ ಈ ಯೋಜನೆಗಾಗಿ ಖರ್ಚಾಗಿದ್ದು, ಭದ್ರಾ ಯೋಜನೆ ಕಾಮಗಾರಿ ಮಾತ್ರ ಇನ್ನು ಪೂರ್ಣವಾಗದೆ ಮಂದಗತಿಯಲ್ಲಿ ಸಾಗತೊಡಗಿದೆ. ಆದ್ರೂ ಈ ಭದ್ರಾ ಯೋಜನೆಯನ್ನೇ ಅಸ್ತ್ರವಾಗಿಸಿಕೊಂಡಿರೋ ಕಾಂಗ್ರೆಸ್ ಅಭ್ಯರ್ಥಿ ಸಂಸದ ಚಂದ್ರಪ್ಪ ತಾವೊಬ್ಬ ಭಗೀರಥ. ಬರದನಾಡಿನ ನೀರಿನ ಬವಣೆ ನೀಗಿಸಲು ಭದ್ರಾ ಯೋಜನೆ ತಂದ ಭದ್ರಾ ಕಾಮಗಾರಿಯ ಮೇಸ್ತ್ರಿ ಅಂತ ಪ್ರಚಾರ ಗಿಟ್ಟಿಸುವ ಮೂಲಕ ಮತಭೇಟೆಯಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿರೋ ಚುನಾವಣಾ ಆಯೋಗ ಇವರಿಗೆ ನೀತಿಸಂಹಿತೆ ‌ಉಲ್ಲಂಘನೆಯ ನೋಟಿಸ್ ಜಾರಿಮಾಡಿದೆ.

ಇನ್ನು ಹೇಳಿಕೆ ಹಾಗೂ ಭದ್ರಾ ಕಾಮಗಾರಿಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರೋ ಕೈ ನಾಯಕರ ನಡೆಗೆ ಸಾರ್ವಜನಿಕರಿಂದಲೂ ವ್ಯಾಪಕ ವಿರೋಧ ವ್ಯಕ್ತ ವಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಕೂಡ ಕೈ ನಾಯಕರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಚಿತ್ರದುರ್ಗದ ಹೋರಾಟಗಾರರ ಫಲವಾದ ಭದ್ರಾ ಯೋಜನೆ ಇದೀಗ ಚುನಾವಣೆಯ ಅಸ್ತ್ರವಾಗಿ ಬಳಕೆಯಾಗಿದ್ದು, ಜಿಲ್ಲೆಯಾದಂತ್ಯ ನೀರಿನ ಬವಣೆ ಮಾತ್ರ ನೀಗಿಲ್ಲ‌. ಈಗಾಗಲೇ ಭದ್ರಾ ಯೋಜನೆಯ ಅಧಿಕಾರಿಗಳು ಒಂದು ಕಾಲುವೆ ಮೂಲಕ ನೀರನ್ನು ಹರಿಸಿ ಕೇವಲ ಪ್ರಯೋಗಿಕವಾಗಿ ಪರೀಕ್ಷೆ ನಡೆಸಿದ್ದನೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ದಾಳವಾಗಿ ಬಳಕೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. Body:ಲೊಕConclusion:ಭದ್ರಾ ಸಮರ
Last Updated : Apr 4, 2019, 1:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.