ಚಿತ್ರದುರ್ಗ: ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿದೆ. ಸಿಎಎ, ಎನ್ಆರ್‌ಸಿ ವಿರೋಧಿಸುತ್ತಿರುವವರು ದೇಶ ದ್ರೋಹಿಗಳು ಎಂದು ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ ಎನ್.ರವಿಕುಮಾರ್ ಆಪಾದಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿಗೆ ನಮ್ಮ ದೇಶದ ಪೌರತ್ವ ಸಿಕ್ಕಿದ್ದರೂ ಸಿಎಎ ವಿರೋಧಿಸುತ್ತಿದ್ದಾರೆ. ನಮ್ಮ ದೇಶದ ಯಾವುದೇ ಒಬ್ಬ ವ್ಯಕ್ತಿಗೆ ಪೌರತ್ವ ರದ್ದಾಗುವುದಿಲ್ಲ ಎಂದರು.
ರಾಜ್ಯದ 58 ಸಾವಿರ ಬೂತ್‌ಗಳಲ್ಲಿ 26ನೇ ತಾರೀಖು ರಾಷ್ಟ್ರಧ್ವಜ ಹಾರಿಸುವ ಮೂಲಕ ಬೂತ್ ಅಧ್ಯಕ್ಷರುಗಳು ಮೋದಿಗೆ ಸಿಎಎ ಬಗ್ಗೆ ಒಪ್ಪಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ದೇಶದ್ರೋಹದ ಪರಮಾವಧಿ ಮೆರೆಯುತ್ತಿದೆ. ಪಾಕಿಸ್ತಾನದ ಪರ ಕೆಲಸ ಮಾಡುತ್ತಿದೆ. ಕಾಂಗ್ರೆಸ್ನ ಪಾಕ್ ಪಕ್ಷವನ್ನಾಗಿ ಮಾಡಿ ಬಿಡಿ, ಕಾಂಗ್ರೆಸ್ ಪಾಕಿಸ್ತಾನದ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಅದು ಸುಳ್ಳಿನ ಪಕ್ಷ, ಅಪಪ್ರಚಾರದ ಪಕ್ಷ ಎಂದು ಬದಲಾಯಿಸಿಕೊಳ್ಳೋದು ಒಳೀತು ಎಂದರು.