ETV Bharat / state

ಚಿತ್ರದುರ್ಗ : ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಅಂಗವಾಗಿ 21 ಸಾವಿರ ಸೀಡ್​​ಬಾಲ್ ಎಸೆಯಲು ಮುಂದಾದ ಬಿಜೆಪಿ

ಕಾಡಿನ ಪ್ರಾಣಿ-ಪಕ್ಷಿಗಳು ನಾಡಿನ ಕಡೆಗೆ ಬರುತ್ತಿದ್ದು, ಅವುಗಳಿಗೂ ಹಣ್ಣು-ಹಂಪಲು ಸಿಗಬೇಕು. ಅವುಗಳ ರಕ್ಷಣೆಯೂ ಆಗಬೇಕು, ಈ ನಿಟ್ಟಿನಲ್ಲಿ ಕೂಡ ಹಲಸು, ನೇರಳೆ, ಬೇವು ಇನ್ನಿತರೆ ಗಿಡಗಳ ಬೀಜ ಹಾಕಲಾಗುತ್ತಿದೆ‌..

bjp-leaders-decided-to-throw-21-thousand-seed-ball-to-forestation
ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಅಂಗವಾಗಿ 21 ಸಾವಿರ ಸೀಡ್​​ಬಾಲ್ ಎಸೆಯಲು ಮುಂದಾದ ಬಿಜೆಪಿ
author img

By

Published : Jul 4, 2021, 7:02 PM IST

ಚಿತ್ರದುರ್ಗ : ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಹೆಚ್ಚಿಸುವ ಸಲುವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ನೇತೃತ್ವದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬೀಜದುಂಡೆಗಳನ್ನು ತಯಾರಿಸಿ ಜೋಗಿಮಟ್ಟಿ ಅರಣ್ಯದಲ್ಲಿ ‘ಸೀಡ್​​​ಬಾಲ್’ಎಸೆಯುವ ಕಾರ್ಮಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಅಂಗವಾಗಿ 21 ಸಾವಿರ ಸೀಡ್​​ಬಾಲ್ ಎಸೆಯಲು ಮುಂದಾದ ಬಿಜೆಪಿ

ಇತ್ತೀಚಿನ ದಿನಗಳಲ್ಲಿ ಕಾಡುಗಳ್ಳರ ಉಪಟಳದಿಂದ ಅರಣ್ಯ ನಾಶವಾಗುತ್ತಿದೆ. ಇದಕ್ಕಾಗಿ ಗಿಡ-ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸುಮಾರು 21 ಸಾವಿರ ಬೀಜದುಂಡೆಗಳನ್ನು ಬಿಜೆಪಿ ಕಾರ್ಯಕರ್ತರು ಮೂರು ದಿನಗಳಿಂದ ತಯಾರಿಸಿದ್ದಾರೆ. ಇಂದು ಆ ಬೀಜದುಂಡೆಗಳನ್ನು ಕಾಡಿನಲ್ಲಿ ಎಸೆದು ಅರಣ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇನ್ನು, ಕಾಡಿನ ಪ್ರಾಣಿ-ಪಕ್ಷಿಗಳು ನಾಡಿನ ಕಡೆಗೆ ಬರುತ್ತಿದ್ದು, ಅವುಗಳಿಗೂ ಹಣ್ಣು-ಹಂಪಲು ಸಿಗಬೇಕು. ಅವುಗಳ ರಕ್ಷಣೆಯೂ ಆಗಬೇಕು, ಈ ನಿಟ್ಟಿನಲ್ಲಿ ಕೂಡ ಹಲಸು, ನೇರಳೆ, ಬೇವು ಇನ್ನಿತರೆ ಗಿಡಗಳ ಬೀಜ ಹಾಕಲಾಗುತ್ತಿದೆ‌.

ಓದಿ: ಹರಿಹರ ಶಾಸಕನ ಮಗಳ ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಡಿಸಿಯಿಂದ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.