ETV Bharat / state

ಚಿತ್ರದುರ್ಗ ನಗರದಲ್ಲಿ ಓಡಾಡಿದ ಕರಡಿ: ಜನರಲ್ಲಿ ಆತಂಕ

ಇಲ್ಲಿನ ಜನವಸತಿ ಪ್ರದೇಶದ ಬಳಿ ಕರಡಿ ಕಾಣಿಸಿಕೊಂಡಿದ್ದು, ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿನ ಜೋಗಿಮಟ್ಟಿ ವನ್ಯಧಾಮದಿಂದ ರಾತ್ರಿ ವೇಳೆ ಕಾಡು ಪ್ರಾಣಿಗಳು ನಗರದೆಡೆ ಬರುತ್ತಿದ್ದು, ಇದೀಗ ಕರಡಿ ಬಂದಿರುವ ಕುರಿತು ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

The bear that wanders into the city: Homelessness among residents
ನಗರದೊಳಗೆ ಅಡ್ಡಾದಿಡ್ಡಿ ಓಡಾಡಿದ ಕರಡಿ: ನಿವಾಸಿಗಳಲ್ಲಿ ಮನೆಮಾಡಿದ ಆತಂಕ
author img

By

Published : Aug 25, 2020, 2:53 PM IST

ಚಿತ್ರದುರ್ಗ: ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಚಿತ್ರದುರ್ಗ ನಗರಕ್ಕೆ ಕೂಗಳತೆ ದೂರದಲ್ಲಿರುವ ಜೋಗಿಮಟ್ಟಿ ವನ್ಯಧಾಮದಿಂದ ಕಾಡು ಪ್ರಾಣಿಗಳು ರಾತ್ರಿ ಹೊತ್ತು ನಗರ ಪ್ರದೇಶಕ್ಕೆ ಆಗಮಿಸುತ್ತಿವೆ.

ಇದಿಗ ಮತ್ತೆ ಜಿಲ್ಲಾ ಪಂಚಾಯತ್​​ ಕಚೇರಿ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಜನತೆ ಭಯಭೀತರಾಗಿದ್ದಾರೆ. ಅದೇ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದ ಯುವಕರು ಕರಡಿ ಓಡಾಟ ಕಂಡು ವಿಡಿಯೋ ಮಾಡಿದ್ದಾರೆ.

ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವ ಕರಡಿ

ಕರಡಿ ರಸ್ತೆಯ ಬದಿಯಲ್ಲಿ ಓಡಾಡುತ್ತಿದ್ದು, ಬಳಿಕ ಓಡಿ ಮರೆಯಾಗಿದೆ. ಜಿಲ್ಲಾ ಪಂಚಾಯತ್​ ಕಚೇರಿ ಕೂಗಳತೆ ದೂರದಲ್ಲಿರುವ ಟೀಚರ್ಸ್ ಕಾಲೋನಿ, ಒನಕೆ‌ ಓಬವ್ವ ಕ್ರೀಡಾಂಗಣ ಬಳಿಯ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಸದ್ಯ ಕರಡಿ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.