ಚಿತ್ರದುರ್ಗ: ಜಾನುವಾರುಗಳಿಗೆ ಮೇವಿಗಾಗಿ ಕೂಡಿಟ್ಟ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಸುಟ್ಟು ಕರಕಲಾದ ಘಟನೆ ಹೊಸದುರ್ಗ ತಾಲೂಕಿನ ಕಾರೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ಹುಲ್ಲಿನ ಬಣವೆಗೆ ತಲುಲಿದೆ. ಕಾರೆಹಳ್ಳಿ ಗ್ರಾಮದ ದೊಡ್ಡಯ್ಯ ಗೊರವಾಳ, ದೇವರಾಜ್ ಹಾಗೂ ಮಂಜುನಾಥ ಗೊರೆಹಾಳ ಎಂಬ ರೈತರಿಗೆ ಸೇರಿದ ಅಂದಾಜು 25ಕ್ಕೂ ಅಧಿಕ ಟ್ರಾಕ್ಟರ್ನಷ್ಟು ಮೇವು ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ಸಮಾರು 2 ಲಕ್ಷ ರೂ. ಮೌಲ್ಯದ ಮೇವು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಬಣವೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಕಿ ವೇಗ ಹೆಚ್ಚುತ್ತಿದ್ದಂತೆ ಕಾರೆಹಳ್ಳಿ ಗ್ರಾಮದ ಜನರು ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎರಡು ಅಗ್ನಿಶಾಮಕ ವಾಹನಗಳು ಅಧಿಕಾರಿ ಎಚ್. ಆಶೋಕ್ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ರಾಗಿ ಹುಲ್ಲು, ಕಡಲೆ ಹೊಟ್ಟು, ನವಣೆ ಹೊಟ್ಟು ಸೇರಿದಂತೆ ಅಪಾರ ಪ್ರಮಾಣದ ಮೇವು ನಾಶವಾಗಿದ್ದು, ಶ್ರೀರಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.