ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಮುಂದುವರಿದಿವೆ. ಆದ್ರೆ ನಗರದ ಖಾಸಗಿ ಶಾಲೆಯ ಗೋಡೆ ಮೇಲೆ ಬೈಕಾಟ್ ಎನ್ಆರ್ಸಿ, ಸಿಎಎ ಎಂಬ ಭಿತ್ತಿ ಪತ್ರವನ್ನು ಕಿಡಿಗೇಡಿಗಳು ಅಂಟಿಸಿದ್ದಾರೆ.
ನಗರದ ಗೋಪಾಲಪುರ ರಸ್ತೆಯಲ್ಲಿರುವ ಖಾಸಗಿ ಶಾಲೆಯ (ಲಿಟಲ್ ಏಂಜೆಲ್ ಶಾಲೆ) ಗೋಡೆ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಭಿತ್ತಿ ಪತ್ರವನ್ನು ಅಂಟಿಸಿದ್ದು, ಅದರಲ್ಲಿ ನಾವು ಭಾರತೀಯರು, ಸಂವಿಧಾನವನ್ನೂ ಗೌರವಿಸುತ್ತೇವೆ. ಆದ್ರೆ ಎನ್ಆರ್ಸಿ, ಸಿಎಎ ಅನ್ನು ವಿರೋಧಿಸುತ್ತೇವೆ ಎಂದು ಬರೆದಿದ್ದಾರೆ.
ಆ ಭಿತ್ತಿ ಪತ್ರವನ್ನು ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಪಟ್ಟುಹಿಡಿದಿದ್ದರಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಶಾಲೆಯ ಆಡಳಿತ ಮಂಡಳಿ ಭಿತ್ತಿ ಪತ್ರವನ್ನು ತೆರವುಗೊಳಿಸಿದ್ದಾರೆ.