ಚಿತ್ರದುರ್ಗ: ಸಾಗುವಳಿ ಭೂಮಿ ಸಕ್ರಮಕ್ಕೆ ಅರ್ಜಿ ಪಡೆಯಲು ಸಿಬ್ಬಂದಿ ವಿಳಂಬ ಮಾಡಿದ್ದಕ್ಕೆ ಫಲಾನುಭವಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿಯ ನಾಡ ಕಚೇರಿಯಲ್ಲಿ ನಡಿದಿದೆ.
ಈಗಾಗಲೇ ರಾಜ್ಯಾದ್ಯಂತ ಅನ್ಲೈನ್ ಅರ್ಜಿ ಸಲ್ಲಿಸಲು ತಿಳಿಸಲಾಗಿದ್ದು, ಈ ಅರ್ಜಿ ಸ್ವೀಕರಿಸಲು ಸಿಬ್ಬಂದಿ ವಿಳಂಬ ಮಾಡುತ್ತಿರುವುದರಿಂದ ಆಕ್ರೋಶಿತರಾದ ಫಲಾನುಭವಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರು.ಸೂರ್ಯ ಉದಯಿಸುವ ಮುನ್ನವೇ ನಾಡ ಕಚೇರಿ ಬಳಿ ಬಂದು ಸಾಲಾಗಿ ನಿಂತ ಅರ್ಜಿದಾರರು, ಅರ್ಜಿ ಸಲ್ಲಿಸಲು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಆದರೂ ಅರ್ಜಿ ವಿಳಂಬ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.