ETV Bharat / state

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹಿಸಿದ ಮಾಳವಿಕಾ - ನಟಿ ಮಾಳವಿಕಾ ಅವಿನಾಶ್​ ಲೇಟೆಸ್ಟ್​​ ನ್ಯೂಸ್

ಚಿತ್ರದುರ್ಗ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆ ರಾಮ ಮಂದಿರಕ್ಕೆ ಹಣ ಸಂದಾಯ ಮಾಡಲು ನಿಧಿ ಸಂಗ್ರಣಾ ಅಭಿಯಾನ ಆರಂಭಿಸಿದೆ.

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹಿಸಿದ ನಟಿ ಮಾಳವಿಕಾ
Actress Malavika Avinash collected money for construction of Ram Mandir
author img

By

Published : Jan 17, 2021, 1:29 PM IST

ಚಿತ್ರದುರ್ಗ: ನಗರ ಭಜರಂಗಳದಳ ಕಛೇರಿಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಟಿ ಮಾಳವಿಕಾ ಅವಿನಾಶ್​ ಅವರು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹಿಸಿದ ನಟಿ ಮಾಳವಿಕಾ

ಜಿಲ್ಲೆಯ ಪ್ರತಿ ಮನೆ-ಮನೆಗೂ ತೆರಳಿ ನಿಧಿ ಸಂಗ್ರಹಿಸಿ ರಾಮ ಮಂದಿರಕ್ಕೆ ಹಣ ಸಂದಾಯ ಮಾಡಲು ನಿಧಿ ಸಂಗ್ರಣಾ ಅಭಿಯಾನಕ್ಕೆ ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆ ಚಾಲನೆ ನೀಡಿದ್ದು, ಸಮಾಜದ ಪ್ರತಿಯೊಬ್ಬರನ್ನು ರಾಮ ಮಂದಿರ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಳವಿಕಾ ಮನೆ ಬಾಗಿಲಿಗೆ ತೆರಳಿ ರಶೀದಿ ನೀಡಿ ನಿಧಿ ಸಂಗ್ರಹಿಸಿದರು‌.

ಓದಿ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು: ಸರ್ಕಾರದ ವಿರುದ್ಧ ರೈತರ ಆಕ್ರೋಶ

ರಾಜ್ಯದಲ್ಲಿ ಎಸ್‌ಬಿಐ ಶಾಖೆಗಳ ಮೂಲಕ ಮಂದಿರ ನಿರ್ಮಾಣ ಟ್ರಸ್ಟ್​ಗೆ ನೇರವಾಗಿ ಜನರು ಹಣ ಸಂದಾಯ ಮಾಡಬಹುದಾಗಿದೆ‌. ಮನೆ,ಮನೆಗೆ ನಿಧಿ ಸಂಗ್ರಹ ಅಭಿಯಾನದ ಮೂಲಕ 10 ರೂ.ಗಳಿಂದ 2 ಸಾವಿರ ರೂ.ವರೆಗೂ ಹಣ ಪಡೆದುಕೊಳ್ಳಲಿದ್ದು, ಬಳಿಕ ರಾಮ ಮಂದಿರ ಟ್ರಸ್ಟ್ ಖಾತೆಗೆ ಹಣ ಡೆಪಾಸಿಟ್ ಮಾಡಲಾಗುತ್ತಿದೆ‌. ರಾಜ್ಯದಲ್ಲಿ ಫೆ.05 ವರೆಗೂ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಳವಿಕಾ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.