ಚಿತ್ರದುರ್ಗ: ನಗರದ ಸಿಕೆ ಪುರ (ಕೆಳಗೋಟೆ) ಯಲ್ಲಿರುವ ನಗರ ಸಭೆಯ ಜಾಗವನ್ನು ಗೌರಮ್ಮ ತಿಪ್ಪೇಸ್ವಾಮಿ ಎಂಬುವರು ಇಬ್ಬರಿಗೆ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೊದಲಿಗೆ ಗೌರಮ್ಮ ತಿಪ್ಪೇಸ್ವಾಮಿ ದಂಪತಿ ಪೈಲ್ ರಾಜಣ್ಣ ಎಂಬುವರಿಗೆ ಕಳೆದ 1992 ರಲ್ಲಿ 27ವರ್ಷಗಳ ಹಿಂದೆ ಮನೆಯನ್ನು ಮಾರಾಟ ಮಾಡಿದ್ದಾರೆ. ರಾಜಣ್ಣನವರು ಖರೀದಿ ಮಾಡಿದ ಹಂಚಿನ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಿಕೊಂಡಿದ್ದಾರೆ.
ಈ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿರುವ ಎರಡನೇ ಮಾಲೀಕರಾದ ಓಬಕ್ಕ ಜಯಣ್ಣ ಎಂಬ ದಂಪತಿ, ಈ ಜಾಗ ನಮಗೆ ಸೇರಿದ್ದು ಎಂದು ಮನೆ ಕೆಡವಿ ಹಾಕಲು ಮುಂದಾದಾಗ ಈ ಅಂಶ ಬೆಳಕಿದೆ ಬಂದಿದೆ.
ಈ ಕುರಿತು ನಗರಸಭೆ ಕಚೇರಿಯಲ್ಲಿ ಮಾಹಿತಿ ಪಡೆಯಲು ಮುಂದಾದಾಗ, ಇದೇ ರೀತಿ ನಗರಸಭೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಸುಮಾರು 8ಸಾವಿರಕ್ಕೂ ಹೆಚ್ಚು ಮನೆಗಳಿರುವ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ತಮಗೆ ಮಾಲೀಕತ್ವದ ದಾಖಲೆಗಳೇ ಇಲ್ಲದ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಒಬ್ಬರಿಂದೊಬ್ಬರಿಗೆ ಮಾರಾಟ ಮಾಡುತ್ತಿರುವ ಜಾಲದ ಸುಳಿವು ಸಿಕ್ಕಿದೆ.ಆದರೆ , ದಶಕಗಳ ಕಾಲದಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಸಾವಿರಾರು ಜನರು ಮಾತ್ರ ನಕಲಿ ರಶೀದಿ ಪಡೆದು ಕಂದಾಯ ಪಾವತಿಸಿಕೊಂಡು ಬರುತ್ತಿದ್ದಾರೆ. ಆದರೆ ಆ ಕಂದಾಯದ ಹಣ ಯಾರ ಜೇಬು ಸೇರುತ್ತಿದೆ ಎಂಬುದು ಮಾತ್ರ ನಿಗೂಢ.