ETV Bharat / state

ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ ಆರೋಪ: ರೈತರಿಂದ ಪ್ರತಿಭಟನೆ - Chitradurga news 2020

ಯೂರಿಯಾ ಗೊಬ್ಬರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿತ್ರದುರ್ಗದ ರೈತರು ಪ್ರತಿಭಟಿಸಿದ್ದಾರೆ.

accused-of-illegal-fertilizer-procurement-in-chitradurga
ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ
author img

By

Published : Sep 7, 2020, 8:47 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಧರಣಿ ನಡೆಸಿದ ಅವರು, ಯೂರಿಯಾ ರಸಗೊಬ್ಬರ ತುಂಬಿದ್ದ ಲಾರಿ ತಡೆದು ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗೊಬ್ಬರಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ ಆರೋಪ

ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ರೈತರು, ಕೂಡಲೇ ಸ್ಥಳಕ್ಕೆ ತಹಶೀಲ್ದಾರ್ ಬರುವಂತೆ ಪಟ್ಟು ಹಿಡಿದರು. ಇದೇ ವೇಳೆ ಗೊಬ್ಬರ ಸಿಗದೆ ರೈತರು ಹೈರಾಣಾಗಿದ್ದು, ಕೂಡಲೇ ರಸಗೊಬ್ಬರ ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.