ಚಿತ್ರದುರ್ಗ: ಎಸಿಬಿ ದಾಳಿಗೊಳಗಾದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎ.ಇ. ಮಹದೇವಪ್ಪ ಅವರ ಆಸ್ತಿ ಪರಿಶೀಲನೆ ನಡೆಸಲಾಗಿದೆ.
ಹೊಳಲ್ಕೆರೆ ತಾಲೂಕಿನ ಕಣಿವೆಹಳ್ಳಿಯಲ್ಲಿರುವ ಮಹದೇವಪ್ಪ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ಗ್ರಾಮದಲ್ಲಿ ಮಹದೇವಪ್ಪ ಅವರಿಗೆ ಸೇರಿದ 2ಎಕರೆ ತೆಂಗಿನ ತೋಟ, 1ಎಕರೆ ಭೂಮಿ, 1/4ಎಕರೆ ಅಡಿಕೆ ತೋಟ ಇದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ.
ಇನ್ನು ಹೆಂಡತಿಯ ತವರು ಚಿಕ್ಕಮಗಳೂರು ಜಿಲ್ಲೆಯ ಬೀರನಹಳ್ಳಿ ಆಗಿದ್ದು, ಅದೇ ಗ್ರಾಮದಲ್ಲಿರುವ 4 ಎಕರೆ ತೆಂಗಿನ ತೋಟ, 8 ಎಕರೆ ಬೆದ್ದಲು ಭೂಮಿ, 2 ಎಕರೆ ಅಡಿಕೆ ತೋಟ ಮಹದೇವಪ್ಪನವರಿಗೆ ಸೇರಿದ್ದು ಎನ್ನಲಾಗ್ತಿದೆ.
ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿ ವಾಸವಾಗಿದ್ದು, ಓರ್ವ ಮಗ ಸಾಫ್ಟ್‌ವೇರ್ ಎಂಜಿನಿಯರ್, ಮತ್ತೋರ್ವ ಮಗ ಪ್ರೊಫೆಸರ್ ಆಗಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲೂ ಸ್ವಂತ ಮನೆ, ಆಸ್ತಿಪಾಸ್ತಿಯನ್ನು ಮಹದೇವಪ್ಪ ಹೊಂದಿದ್ದಾರೆ ಎಂದು ಹೇಳಲಾಗ್ತಿದೆ.