ETV Bharat / state

ಶಿಥಿಲಾವಸ್ಥೆಗೆ ತಲುಪಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಗ್ರಾಮಸ್ಥ!

ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಶಿಥಿಲಾವಸ್ಥೆಗೆ ತಲುಪಿದ್ದ ತನ್ನೂರಿನ ಶಾಲೆಗೆ ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ಮಿಸುವ ಮೂಲಕ ಚಿತ್ರದುರ್ಗ ತಾಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬರು ಮಾದರಿಯಾಗಿದ್ದಾರೆ.

a-villager-has-given-a-new-look-to-a-dilapidated-government-school
ಶಿಥಿಲಾವಸ್ಥೆಗೆ ತಲುಪಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಗ್ರಾಮಸ್ಥ!
author img

By

Published : Jan 22, 2021, 10:10 AM IST

ಚಿತ್ರದುರ್ಗ:ತಾಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬರು ತನ್ನೂರಿನ ಸರ್ಕಾರಿ ಶಾಲೆಗೆ ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ಮಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಶಿಥಿಲಾವಸ್ಥೆಗೆ ತಲುಪಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಗ್ರಾಮಸ್ಥ!

ಹೌದು.. ಕುರುಬರಹಟ್ಟಿ ಗ್ರಾಮದ ಸರ್ಕಾರಿ ಶಾಲೆ, ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಶಿಥಿಲಾವಸ್ಥೆಗೆ ತಲುಪಿತ್ತು. ಶಾಲಾ ಕೊಠಡಿಗಳನ್ನು ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಅಂದ ಹಾಗೆ ಈ ಶಾಲೆಯಲ್ಲಿ ಒಟ್ಟು 6 ಕೊಠಡಿಗಳಿವೆ. 1 ರಿಂದ 8ನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಥಿಲಾವಸ್ಥೆಗೆ ತಲುಪಿದ ಕೊಠಡಿಗಳಲ್ಲೇ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಇದನ್ನು ಕಂಡ ದಂಡಿನ ಕುರುಬರಹಟ್ಟಿ ಗ್ರಾಮದ ಸನ್ನಕ್ಕಿ ಪ್ರಹ್ಲಾದ್​, ತಾನು ಕೂಡಿಟ್ಟ ಹಣದಲ್ಲಿ ಅತಿದೊಡ್ಡ ಕೊಠಡಿಯೊಂದನ್ನು ನಿರ್ಮಿಸಿ, ಗ್ರಾಮದ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಜೊತೆಗೆ ಈ ಕೊಠಡಿ ಉದ್ಘಾಟನೆಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರಿಂದ ಮಾಡಿಸಿ, ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು, ಪ್ರಹ್ಲಾದ್​ ಕೂಡ ಇದೇ ಶಾಲೆಯಲ್ಲಿ ಓದಿ, ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆದಿದ್ದರಂತೆ. ಹೀಗಾಗಿ, ತಾನು ಕಲಿತ ಶಾಲೆ ಅಭಿವೃದ್ಧಿಯಿಂದ ವಂಚಿತರಾಗಬಾರದು ಹಾಗೂ ಮಕ್ಕಳು ಮಣ್ಣಲ್ಲಿ ಕುಳಿತು ಭೋಜನ ಮಾಡಬಾರದು ಎಂಬ ಉದ್ದೇಶದಿಂದ ಒಂದು ಕೊಠಡಿ ನಿರ್ಮಿಸಿ, ಉಳಿದ ಕೊಠಡಿಗಳಿಗೆ ಬಣ್ಣ ಬಳಸಿದ್ದಾರೆ.

ಇದರ ಜೊತೆಗೆ ತಮ್ಮ ನಿವೃತ್ತಿ ವೇತನದ ಶೇ. 20ರಷ್ಟು ಹಣವನ್ನ ಶಾಲೆ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದ್ದಾರೆ. ಶಾಲೆಗೆ ಸುಸಜ್ಜಿತ ಆಸನ ವ್ಯವಸ್ಥೆ, ಶೌಚಾಲಯ, ಗಣಕಯಂತ್ರ ತರಬೇತಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ದೊರಕಿಸಿ ಕೊಡುವ ಮೂಲಕ ಮಾದರಿ ಶಾಲೆಯನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ.

ಒಟ್ಟಿನಲ್ಲಿ ಪ್ರಹ್ಲಾದ್​​, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬೀಳುವ ಹಂತದಲ್ಲಿದ್ದ ದಂಡಿನ ಕುರುಬರಹಟ್ಟಿ ಶಾಲೆಗೆ ಹೊಸ ರೂಪ ನೀಡಿ, ಮಾದರಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.