ಚಿತ್ರದುರ್ಗ : ವಾಮಾಚಾರ ಮಾಡಿಸಿದ್ದನೆಂದು ಧಾರಾವಾಹಿ ನಟನೊಬ್ಬ ವ್ಯಕ್ತಿಯನ್ನು ಬರ್ಬರವಾಗಿ ಕತ್ತು ಕೊಯ್ದು ರುಂಡ ಹೊಲದಲ್ಲಿ ಹೂತಿಟ್ಟಿರುವ ಘಟನೆ ಹಿರಿಯೂರು ತಾಲೂಕಿನ ಶ್ರವಣಗೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ರಮೇಶ್ (45) ಎಂಬಾತ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಇನ್ನು ಕೊಲೆ ಮಾಡಿರುವ ಆರೋಪಿ ಶ್ರೀನಿವಾಸ್ (40) ಎಂಬಾತ ತಲೆಮರಿಸಿಕೊಂಡಿದ್ದಾನೆ. ಆರೋಪಿ ಶ್ರೀನಿವಾಸ್ ಸಂತ ಸಿನಿಮಾದಲ್ಲಿ ಹಾಗೂ ರಂಗೋಲಿ ಧಾರಾವಾಹಿಯಲ್ಲಿ ನಟಿಸಿದ್ದಾನೆಂದು ಹೇಳಲಾಗಿದೆ. ತನ್ನ ಮೇಲೆ ವಾಮಾಚಾರ ಮಾಡ್ಸಿದ್ದಾನೆಂದು ರಮೇಶ್ ಮೇಲೆ ಶ್ರೀನಿವಾಸ್ ಕೋಪಗೊಂಡಿದ್ದ. ಅವನನ್ನು ಹೇಗಾದ್ರೂ ಮುಗಿಸಬೇಕೆಂದು ಶ್ರೀನಿವಾಸ್ ಕೊಲೆಗೆ ಹೊಂಚು ಹಾಕಿ ಕಾಯುತ್ತಿದ್ದ.
ಓದಿ: ಜೆಜೆ ನಗರ ವ್ಯಾಪ್ತಿಯಲ್ಲಿ ಯುವಕನ ಹತ್ಯೆ: ಗೃಹ ಸಚಿವ, ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ದೂರು
ಇನ್ನೂ ರಮೇಶ್ ಬೆಂಗಳೂರಿನಲ್ಲಿ ಅಡಿಗೆ ಬಟ್ಟರೊಬ್ಬರ ಬಳಿ ಕೆಲಸ ಮಾಡಿಕೊಂಡಿದ್ದನು. ಯುಗಾದಿ ಹಬ್ಬಕ್ಕೆ ಊರಿಗೆ ಬಂದಿದ್ದ. ಮನೆಯಲ್ಲಿ ಹೆಂಡತಿ-ಮಕ್ಕಳು ಹಬ್ಬಕ್ಕೆಂದು ತವರಿಗೆ ಹೋಗಿದ್ದರು. ಕೊಲೆಗೆ ಹೊಂಚು ಹಾಕಿ ಕಾಯುತ್ತಿದ್ದ ಶ್ರೀನಿವಾಸ್ಗೆ ಮನೆಯಲ್ಲಿ ರಮೇಶ್ ಒಂಟಿಯಾಗಿರುವುದು ತಿಳಿದಿದೆ.
ರಾತ್ರಿ ರಮೇಶ್ ಒಬ್ಬನೇ ಮಲಗಿದ್ದಾಗ ಶ್ರೀನಿವಾಸ್ ಚಾಕುವನಿಂದ ದಾಳಿ ಮಾಡಿದ್ದಾನೆ. ರಮೇಶ್ನನ್ನು ಶ್ರೀನಿವಾಸ್ ಬರ್ಬರವಾಗಿ ಕೊಲೆ ಮಾಡಿದ ಬಳಿಕ ಆತನ ದೇಹದಿಂದ ರುಂಡವನ್ನು ಬೇರ್ಪಡಿಸಿದ್ದಾನೆ. ನಂತರ ಆ ರುಂಡವನ್ನು ಹೊಲದಲ್ಲಿ ಹೂತಿಟ್ಟು ಪರಾರಿಯಾಗಿದ್ದಾನೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಪಿಎಸ್ಐ ಪರುಶುರಾಮ ಎನ್. ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.