ಚಿತ್ರದುರ್ಗ: ವ್ಯಕ್ತಿವೋರ್ವ ಬಾರ್ನಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ.
ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರನಹಳ್ಳಿಯ ಪಾಲಯ್ಯ ಮೃತ ವ್ಯಕ್ತಿ. ಬಾರ್ನಲ್ಲಿ ಕಳಪೆ ಮದ್ಯ ಪೂರೈಕೆ ಆರೋಪ ಕೇಳಿ ಬಂದಿದೆ. ಗುರುವಾರ ಬೆಳಗ್ಗೆ ಪಾಲಯ್ಯ ವ್ಯಕ್ತಿ ಸಾವನ್ನಪ್ಪಿದ್ದು, ರಾತ್ರಿ 9 ಗಂಟೆಯಾದರೂ ಶವ ಮಾತ್ರ ಬಾರ್ನಲ್ಲೇ ಬಿದ್ದಿತ್ತು ಎನ್ನಲಾಗ್ತಿದೆ.
ವ್ಯಕ್ತಿಯ ಸಾವನ್ನು ಕಂಡು ಆತಂಕಗೊಂಡ ಮಾಲೀಕ ಬಾರ್ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಬರಲು ವಿಳಂಬ ಮಾಡಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.