ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಪಟ್ಟಣದ ಯುವಕನೊರ್ವ ಆರೋಗ್ಯ ಸಚಿವ ಶ್ರೀ ರಾಮುಲು ಅವರಿಗೆ ಮಣ್ಙಿನ ಪ್ರತಿಮೆ ನೀಡಿ ಅಭಿಮಾನ ಮೆರೆದಿದ್ದಾನೆ.
ಸಚಿವರ ಸರಳತೆಗೆ ಮಾರುಹೋಗಿರುವ ಹೊಸದುರ್ಗ ಪಟ್ಟಣದ ಶರತ್ ಎಂಬ ಯುವಕ ಐದು ಸಾವಿರಕ್ಕಿಂತ ಹೆಚ್ಚು ಹಣ ವ್ಯಯ ಮಾಡಿ ಕೆಂಪು ಮಣ್ಣಿನಲ್ಲಿ ಹತ್ತು ಕೆಜಿ ತೂಕದ ಸಚಿವರ ಪ್ರತಿಮೆ ಮಾಡಿಸಿ ಅದನ್ನು ಸಚಿವ ಶ್ರೀ ರಾಮುಲುಗೆ ನೀಡಿ ಅಭಿಮಾನ ಮೆರೆದಿದ್ದಾನೆ.
ಇನ್ನು ಪ್ರತಿಮೆ ನೀಡಿದ ಬಳಿಕ ಅಭಿಪ್ರಾಯ ಹಂಚಿಕೊಂಡಿರುವ ಯುವಕ ಸಚಿವ ಶ್ರೀ ರಾಮುಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಕಳೆದ ಎರಡು ವರ್ಷಗಳಿಂದ ಬನ್ನಿ ಮರದ ಪೂಜೆ ಮಾಡುತ್ತಿದ್ದಾನಂತೆ. ಇನ್ನು ಒಂದು ಕೆಲ ಮಾಹಿತಿ ಹಂಚಿಕೊಂಡಿರುವ ಅಭಿಮಾನಿ ಶರತ್ ಸಚಿವ ಶ್ರೀ ರಾಮುಲು ಸಿಎಂ ಆದರೆ, ತನ್ನ ಸಾವಿನ ಬಳಿಕ ತನ್ನ ಅಂಗಾಂಗಗಳನ್ನು ದಾನ ಮಾಡುವುದಾಗಿ ತಿಳಿಸಿದ್ದಾನೆ.