ಚಿತ್ರದುರ್ಗ: ಆಂಜನೇಯ ದೇಗುಲದ ಬಾಗಿಲು ಮುರಿದು ಹುಂಡಿಗೆ ಕನ್ನ ಹಾಕಿರುವ ಘಟನೆ ಚಿತ್ರದುರ್ಗ ತಾಲೂಕಿನ ಬುಡ್ರನಾಳ್ ಗ್ರಾಮದ ಬಳಿ ನಡೆದಿದೆ.
ಆಂಜನೇಯ ದೇಗುಲದ ಕಬ್ಬಿಣದ ಗೇಟ್ ಮುರಿದು ಹುಂಡಿ ಹಣ ಕಳವು ಮಾಡಲಾಗಿದೆ. ಹುಂಡಿಯಲ್ಲಿದ್ದ ಸುಮಾರು 1 ಲಕ್ಷ ರೂ. ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಭರಮಸಾಗರ ಠಾಣೆಯ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರಲ್ಲದೇ ಖದೀಮರಿಗಾಗಿ ಬಲೆ ಬೀಸಿದ್ದಾರೆ.