ETV Bharat / state

ಎಲ್ಲದಕ್ಕೂ ಕಾಲ ಬರಬೇಕು.. ಹಾಗೇ ಕಾಂಗ್ರೆಸ್ ಸೇರುವುದಕ್ಕೂ ಕಾಲ ಬರಬೇಕು: ವೈ.ಎಸ್.ವಿ. ದತ್ತ - psi exam

ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ನಾನು ಜೆಡಿಎಸ್​ನಲ್ಲಿ ಇರುತ್ತೇನೆ ಎಂದು ಹೇಳುವುದಕ್ಕೂ ಕಾಲ‌ ಬರಬೇಕು. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವುದಕ್ಕೂ ಕಾಲ ಬರಬೇಕು ಎಂದಿದ್ದಾರೆ.

ysv datta statement on join congress party
ಮಾಜಿ ಶಾಸಕ ವೈ.ಎಸ್.ವಿ.ದತ್ತ
author img

By

Published : May 4, 2022, 5:54 PM IST

ಚಿಕ್ಕಮಗಳೂರು: ಜೆಡಿಎಸ್ ತೊರೆಯುವ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ‌ ಹೇಳಿಕೆ ನೀಡಿದ್ದು, ಎಲ್ಲದಕ್ಕೂ ಕಾಲ ಬರಬೇಕು. ನಾನು ಜೆಡಿಎಸ್​ನಲ್ಲಿ ಇರುತ್ತೇನೆ ಎಂದು ಹೇಳುವುದಕ್ಕೂ ಕಾಲ‌ ಬರಬೇಕು. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವುದಕ್ಕೂ ಕಾಲ ಬರಬೇಕು. ಸೂಕ್ತ ಕಾಲ ಬಂದಾಗ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

ನಂತರ ಪಿಎಸ್ಐ ನೇಮಕಾತಿ ಹಗರಣ ಕುರಿತು ಮಾತನಾಡಿದ ಅವರು, ಸಂಪೂರ್ಣ ಆಯ್ಕೆ ಪಟ್ಟಿ ರದ್ದು ಪಡಿಸುವುದಕ್ಕಿಂತ ಬೇರೆ ಮಾರ್ಗದ ಬಗ್ಗೆ ಸರ್ಕಾರ ಯೋಚಿಸಲಿ. ಸರ್ಕಾರಕ್ಕೆ ಅದ್ಯಾವುದು ದೊಡ್ಡ ಕೆಲಸ ಅಲ್ಲ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಹಾಗೂ ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿ ಪ್ರತ್ಯೇಕಿಸಿ. ತನಿಖೆ ಹಂತದಲ್ಲಿ ಪ್ರಾಮಾಣಿಕರು, ಅಕ್ರಮ ಎಸಗಿದವರನ್ನು ಪ್ರತ್ಯೇಕ ಮಾಡಿ ಎಂದರು.

ಎಲ್ಲದಕ್ಕೂ ಕಾಲ ಬರಬೇಕು.. ಹಾಗೇ ಕಾಂಗ್ರೆಸ್ ಸೇರುವುದಕ್ಕೂ ಕಾಲ ಬರಬೇಕು
ಪ್ರಾಮಾಣಿಕರಿಗೆ ಧಕ್ಕೆ ಆಗಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಲೆಗೆಲ್ಲ ಒಂದೇ ಮಂತ್ರ ಎಂಬಂತೆ ಸರ್ಕಾರ ನಡೆದುಕೊಳ್ಳಬಾರದು ಎಂದು ದತ್ತ ಹೇಳಿದರು.

ಇದನ್ನೂ ಓದಿ: ದ್ವಿತೀಯ ಪಿಯುಸಿ : ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದ ಜೀವಶಾಸ್ತ್ರ, ಭೂಗೋಳಶಾಸ್ತ್ರ ಪರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.