ಚಿಕ್ಕಮಗಳೂರು: ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯಕ್ಕೆ ನಮ್ಮ ಪಕ್ಷ ಎಲ್ಲಿಯವರೆಗೆ ಬದ್ಧವಾಗಿರುತ್ತೋ ಅಲ್ಲಿಯವರೆಗೂ ನಾನು ಇದೇ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ. ಇದರಿಂದ ಅನ್ಯದಾರಿ ತುಳಿಯುವ ಮಾತೇ ಇಲ್ಲ ಎಂದು ಜೆಡಿಎಸ್ನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಮಾತನಾಡಿದ ಅವರು, ನಾನು ಈ ಬಗ್ಗೆ ಸಾಕಷ್ಟು ಬಾರಿ ಹೇಳಿರುವೆ. ಮೊದಲಿನಿಂದಲೂ ನಾವು ಕೋಮುವಾದಿ ಶಕ್ತಿಗಳನ್ನು ವಿರೋಧಿಸಿಕೊಂಡು ಬಂದವರು. ಜಾತ್ಯಾತೀತ ನಿಲುವಿಗೆ ಕಟಿಬದ್ಧ. ಹಾಗಾಗಿ ಬೇರೆ ಮಾರ್ಗ ಹಿಡಿಯುವುದು ಸುಳ್ಳು. ಆದರೆ, ಬಿಜೆಪಿ ನಮ್ಮ ಪಕ್ಷಕ್ಕೆ ಹತ್ತಿರವಾಗುತ್ತದೆ ಎಂದಾಗ ಎಲ್ಲೋ ಒಂದೆಡೆ ನಮಗೆ ನೋವು ಆಗುತ್ತದೆ. ಕಾರಣ ನಾವು ಅಲ್ಪಸಂಖ್ಯಾತರನ್ನು ಹೆಚ್ಚು ನಂಬಿದವರು. ಅವರ ಜೊತೆ ಒಡನಾಟ ಇರುವುದರಿಂದ ನಮ್ಮಂತಹವರಿಗೆ ಇದನ್ನು ಊಹಿಸುವುದು ಕಷ್ಟಸಾಧ್ಯ. ಎಲ್ಲಿಯವರೆಗೆ ನಮ್ಮ ಪಕ್ಷದ ಸ್ಟ್ಯಾಂಡ್ ಸ್ಪಷ್ಟವಾಗಿತ್ತದೋ ಅಲ್ಲಿಯವರೆಗೂ ನನ್ನದು ಅದೇ ನಿರ್ಧಾರ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರು ಜೆಡಿಎಸ್ ಪಕ್ಷಕ್ಕೆ ಒಂದು ಶಕ್ತಿ. ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಿಡಬಾರದು. ಅವರು ಹೋದ್ರೆ ನಮ್ಮ ಪಕ್ಷಕ್ಕೆ ನಷ್ಟ. ಜಿ.ಟಿ.ಡಿಯವರಿಗೆ ಸೂಕ್ತ ಆದ್ಯತೆ, ಗೌರವ ಕೊಟ್ಟಿಲ್ಲ ಅಂದ್ರೆ ಅದು ತಪ್ಪು. ಜಿ.ಟಿ.ಡಿಯವರಿಗೆ ಸೂಕ್ತ ಆದ್ಯತೆ, ಗೌರವ ಕೊಟ್ಟಿಲ್ಲ ಅಂದ್ರೆ ಅದು ತಪ್ಪು.
ಜಿ.ಟಿ.ಡಿಯವರನ್ನು ಕಡೆಗಣಿಸಿ ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದರೆ ಅವರಿಗೆ ನೋವಾಗುತ್ತೆ. ಜಿ.ಟಿ.ದೇವೇಗೌಡರನ್ನ ಹೋಗಲು ನಾವು ಬಿಡಬಾರದು. ಹಿರಿಯರಾದ ಹೆಚ್.ಡಿ.ದೇವೇಗೌಡರು ಅವರನ್ನು ಕರೆಸಿ ಮಾತನಾಡಬೇಕು. ಅವರ ಮನಸ್ಸಿನ ಭಾವನೆಯನ್ನ ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಮೂಲ ಜನತಾ ಪರಿವಾರದಿಂದ ಬಂದವರಾಗಿದ್ದು ನಮ್ಮಲ್ಲೇ ಉಳಿಯುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದರು.