ಚಿಕ್ಕಮಗಳೂರು: ಲಾಕ್ಡೌನ್ ಕಾರಣ ಚಿಕ್ಕಮಗಳೂರು ನಗರದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ 40ಕ್ಕೂ ಹೆಚ್ಚು ನಿರ್ಗತಿಕರು, ಭಿಕ್ಷುಕರಿಗೆ ಯುವಕರು ಸಹಾಯಹಸ್ತ ಚಾಚಿದ್ದಾರೆ.
ನಗರದ ಹೊರವಲಯದಲ್ಲಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಇಷ್ಟೂ ಮಂದಿಯನ್ನು ರಕ್ಷಿಸಿಡಲಾಗಿದೆ. ನಿತ್ಯ ಅವರಿಗೆ ಈ ಗ್ರೂಪ್ನ ಆಹಾರ, ವಸತಿ ಸೇರಿದಂತೆ ಎಲ್ಲಾ ರೀತಿಯ ಸೇವೆ ಮಾಡುತ್ತಿದೆ.
ವಾರದಿಂದ ಹಗಲು-ರಾತ್ರಿ ಎನ್ನದೇ ಈ ಗ್ರೂಪ್ನ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಈ ಯುವಕರ ಸೇವೆಗೆ ಸಾಮಾಜಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.