ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ ನಡುವೆ ಪ್ರಾಣಿಗಳಿಗೂ ಸರಿಯಾಗಿ ಆಹಾರ ಸಿಗುತ್ತಿಲ್ಲ. ಹಸಿದ ಮಂಗಗಳಿಗೆ ಅನ್ನ ನೀಡಿದ ಕೂಡಲೇ ಮಂಗಗಳು ಅನ್ನ ತಿನ್ನುತ್ತಿರುವ ಮನ ಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಕೋತಿಗಳ ಹಸಿವು ನೀಗಿಸಲು ಬೀರೂರಿನ ಯುವಕರು ಆಹಾರ ನೀಡಿರುವ ಘಟನೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಜಲಪಾತದ ಬಳಿ ಈ ಘಟನೆ ನಡೆದಿದೆ.
ಪ್ರತಿನಿತ್ಯ ಇಲ್ಲಿಗೆ ಬರುವ ಪ್ರವಾಸಿಗರನ್ನ ನೆಚ್ಚಿಕೊಂಡು ಇಲ್ಲಿನ ಮಂಗಗಳು ಬದುಕುತ್ತಿದ್ದವು. ಕೊರೊನಾ ಲಾಕ್‍ಡೌನ್‍ನಿಂದ ಪ್ರವಾಸಿಗರಿಲ್ಲದೆ ಕಲ್ಲತ್ತಿಗರಿ ಖಾಲಿ ಖಾಲಿ ಆಗಿದ್ದು, ಕಳೆದ 20 ದಿನಗಳಿಂದ ದಿನ ಬಿಟ್ಟು ದಿನ ಕೋತಿಗಳಿಗೆ ಆಹಾರ ನೀಡಲಾಗುತ್ತಿದೆ.
ಬೀರೂರಿನ 6 ಯುವಕರು ಕೋತಿ, ಹಸು, ನಾಯಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 300 ಕೋತಿ, 30 ಹಸು, 20 ನಾಯಿಗಳಿಗೆ ಆಹಾರ ನೀಡುತ್ತಿದ್ದು, ಮೊಸರನ್ನ, ಬಾಳೆಹಣ್ಣು, ಬಿಸ್ಕೆಟ್, ಗೆಣಸು, ಕ್ಯಾರೇಟ್ ಮಂಗಗಳಿಗೆ ಆಹಾರವಾಗಿ ನೀಡಲು ಪೊಲೀಸರು ಈ ಯುವಕರಿಗೆ ಪಾಸ್ ಸಹ ನೀಡಿದ್ದಾರೆ.