ETV Bharat / state

ರಸ್ತೆ ಅಪಘಾತ : ತಲೆಯ ಮೇಲೆ ಅಗ್ನಿಶಾಮಕ ವಾಹನ ಚಕ್ರ ಹರಿದು ಮಹಿಳೆ ಸಾವು - woman died in road accident in koppa

ತಲೆ ಮೇಲೆ ಅಗ್ನಿಶಾಮಕ ವಾಹನ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

woman-died-in-road-accident-in-koppa
ಅಗ್ನಿಶಾಮಕ ವಾಹನ ಚಕ್ರ ಹರಿದು ಮಹಿಳೆ ಸಾವು
author img

By

Published : Dec 18, 2021, 4:53 PM IST

ಚಿಕ್ಕಮಗಳೂರು : ಅಪಘಾತದಲ್ಲಿ ತಲೆ ಮೇಲೆ ಅಗ್ನಿಶಾಮಕ ವಾಹನ ಹರಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮುಮ್ತಾಜ್​ (46) ಎಂದು ಗುರುತಿಸಲಾಗಿದೆ. ಪಟ್ಟಣದ ದ್ಯಾವೇಗೌಡ ವೃತ್ತದಿಂದ ವಾಟರ್ ಟ್ಯಾಂಕ್ ವೃತ್ತದ ಕಡೆಗೆ ಅಗ್ನಿ ಶಾಮಕದ ದಳ ವಾಹನ ಸಾಗುತ್ತಿತ್ತು. ಈ ವೇಳೆ ತಿರುವಿನಲ್ಲಿ ವಾಹನದ ಬೈಕ್​ಗೆ ಡಿಕ್ಕಿಯಾಗಿದೆ.

ಬೈಕ್​​ ಅಗ್ನಿಶಾಮಕ ವಾಹನ ಅಪಘಾತ : ಪರಿಣಾಮ ಬೈಕ್​ ಹಿಂಬದಿ ಕುಳಿತಿದ್ದ ಮಹಿಳೆ ಅಗ್ನಿಶಾಮಕ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.