ETV Bharat / state

Wild Elephants: ಕಾಫಿನಾಡಲ್ಲಿ ಕಾಡಾನೆಗಳ ಉಪಟಳ; ಒಂದೂವರೆ ಎಕರೆಯಲ್ಲಿದ್ದ ಕೃಷಿ ನಾಶ - ಮೂಡಿಗೆರೆ

Wild Elephants destroy crops: ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಕೃಷಿಗೆ ಹಾನಿ ಮಾಡುತ್ತಿವೆ.

wild elephants attack on agriclutural fields
ಹಾನಿಗೆ ಒಳಗಾಗಿರುವ ಕೃಷಿ ಬೆಳೆಗಳು
author img

By

Published : Jul 31, 2023, 8:06 AM IST

Updated : Jul 31, 2023, 12:39 PM IST

ಕಾಡಾನೆಯಿಂದ ಹಾನಿಯಾದ ಕೃಷಿ ತೋಟ

ಚಿಕ್ಕಮಗಳೂರು: ಆಹಾರ ಅರಸಿ ತೋಟಕ್ಕೆ ನುಗ್ಗುವ ಕಾಡಾನೆಗಳು ಜಿಲ್ಲೆಯಲ್ಲಿ ರೈತರಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ. ಅದೇ ರೀತಿ, ಒಂಟಿ ಸಲಗವೊಂದು ಎರಡು ದಿನಗಳಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಬೆಳೆದು ನಿಂತಿದ್ದ ಅಡಿಕೆ ಮತ್ತು ಕಾಫಿ ಗಿಡಗಳನ್ನು ಹಾಳು ಮಾಡಿದೆ. ಈ ಘಟನೆ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

ಬೈದುವಳ್ಳಿಯಲ್ಲಿ ಹೆಚ್.ಕೆ.ರಮೇಶ್ ಹಳೇಕೆರೆ ಎಂಬವರ ತೋಟದಲ್ಲಿದ್ದ ಬಗನೆ ಮರ ತಿನ್ನಲು ಕಾಡಾನೆ ಬಂದಿದೆ. ಬಗನೆ ಮರವನ್ನು ತಿನ್ನುವ ಭರದಲ್ಲಿ ಕಾಡಾನೆ ಸುಮಾರು ಒಂದೂವರೆ ಎಕರೆ ಕೃಷಿ ಪ್ರದೇಶವನ್ನು ಸಂಪೂರ್ಣ ನಾಶಪಡಿಸಿದೆ. ಆನೆ ತೋಟದಲ್ಲಿ ತಿರುಗಾಡಿದ್ದು 150ಕ್ಕೂ ಹೆಚ್ಚು ಅಡಿಕೆ ಮರಗಳು, 250ಕ್ಕೂ ಹೆಚ್ಚು ರೋಬಸ್ಟಾ ಕಾಫಿ ಗಿಡಗಳನ್ನು ಬುಡಮೇಲು ಮಾಡಿದೆ. ಸ್ಥಳಕ್ಕೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೂಡ ಎರಡು ಕಾಡಾನೆಗಳು ನಿರಂತರವಾಗಿ ರೈತರ ಜಮೀನಿಗೆ ಲಗ್ಗೆ ಇಡುತ್ತಿದ್ದು, ಅಪಾರ ಹಾನಿ ಮಾಡುತ್ತಿವೆ. ಈ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಊರುಬಗೆ ಸಮೀಪ ಅರ್ಜುನ್ ಎಂಬವರನ್ನು ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದು ವರ್ಷವಾಗುತ್ತಾ ಬಂದಿದೆ. ಇಲ್ಲಿ ಉಪಟಳ ನೀಡುತ್ತಿದ್ದ ಬೈರ ಎನ್ನುವ ಆನೆಯನ್ನು ಹಿಡಿಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದರು.

ಸ್ಥಳೀಯರು ಹೇಳುವ ಪ್ರಕಾರ, ಭೈರ ಸೆರೆಯಾಗಿಲ್ಲ. ಇದೀಗ ಉಪಟಳ ನೀಡುತ್ತಿರುವ ಒಂಟಿಸಲಗವೇ ಭೈರ ಆನೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಜರುಗಿಸಿ ಜನರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಮೂಡಿಗೆರೆ ತಾಲೂಕಿನ ಇನ್ನೊಂದು ಭಾಗದಲ್ಲಿ ತೀವ್ರ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿನ ರೈತರ ಕಾಫಿ ತೋಟಗಳು ಕಾಡಾನೆ ದಾಳಿಯಿಂದ ನಾಶವಾಗಿದೆ. 60ಕ್ಕೂ ಹೆಚ್ಚು ರೈತರ ತೋಟಗಳಿಗೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಕಾಫಿ, ಮೆಣಸು, ಬಾಳೆ, ಏಲಕ್ಕಿ ಹಾಗು ಅಡಿಕೆ ಬೆಳೆ ನಾಶವಾಗಿದೆ.

ಮೂಡಿಗೆರೆ ತಾಲೂಕಿನ ಸಾರಗೋಡು, ಕುಂದೂರು ಗ್ರಾಮಗಳಲ್ಲಿ ಘಟನೆ ನಡೆದಿದೆ. ತೋಟದ ಬೆಳೆಗಳನ್ನು ತುಳಿದು ನಾಶ ಮಾಡಿದ್ದು, ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ: Elephant Task Force: ಕಾಡಾನೆ ದಾಳಿ ತಪ್ಪಿಸಲು ವಿಶೇಷ ಕಾರ್ಯಪಡೆ ರಚನೆ

Last Updated : Jul 31, 2023, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.