ಚಿಕ್ಕಮಗಳೂರು: ಕಾಡಾನೆ ತುಳಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ನಡೆದಿದೆ.
ಪ್ರೇಮನಾಥ ರಾಜು(50) ಮೃತ ಕೂಲಿ ಕಾರ್ಮಿಕ. ಈತ ಮಲ್ಲೇನಹಳ್ಳಿಯ ತೇಜಪಾಲ್ ಎಂಬುವರ ಬಿಂಡಿಗಾ ಎಸ್ಟೇಟ್ ಎಂಬ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಪ್ರೇಮ್ ನಾಥ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದವರಾಗಿದ್ದು, ಹಲವು ವರ್ಷದಿಂದ ತೋಟದ ಲೈನ್ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು.
ಕೆಲಸ ಮುಗಿಸಿ ಸೌದೆ ತರಲು ಹೋದಾಗ ಆನೆ ದಾಳಿ ಮಾಡಿದೆ. ಇನ್ನೂ ಇದು ಮಲ್ಲೇನಹಳ್ಳಿಯಲ್ಲಿ ಒಂಟಿ ಸಲಗದ ದಾಳಿಗೆ ನಡೆದಿರುವ ಎರಡನೇ ಸಲ. ಒಂಟಿ ಸಲಗದ ದಾಳಿಗೆ ಸ್ಥಳೀಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.