ಚಿಕ್ಕಮಗಳೂರು: ಹಂಗರವಳ್ಳಿ ಗ್ರಾಮದಲ್ಲಿ ಕಾಡು ಕೋಣಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯ ಕಾಡಿನಿಂದ ನಾಡಿಗೆ ಅಗಮಿಸುತ್ತಿರುವ ಇವು ಜನರಲ್ಲಿ ಆತಂಕ ಮೂಡಿಸಿವೆ.
ಕಾಡು ಕೋಣವೊಂದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿಕೊಂಡು, ಸಿಕ್ಕ ಕಾಫಿ ತೋಟಗಳಿಗೆ ನುಗ್ಗಿ ಸಾಕಷ್ಟು ನಾಶ ಮಾಡಿದೆ. ಕಾಫಿ ತೋಟದಲ್ಲಿರುವ ಮನೆಯ ಸದಸ್ಯರು ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಈ ಆನೆ ಗಾತ್ರದ ಕಾಡುಕೋಣವನ್ನು ನೋಡಿ ಜನರು ರಸ್ತೆಯಲ್ಲಿ ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗುತ್ತಿದ್ದು, ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗಿಲ್ಲ ಎನ್ನಲಾಗ್ತಿದೆ.
ಪದೇ ಪದೇ ಈ ರೀತಿ ರಸ್ತೆಯಲ್ಲಿ ಹಾಗೂ ಗ್ರಾಮದಲ್ಲಿ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರು ಹಾಗೂ ಜನರಿಗೆ ಆತಂಕ ಶುರುವಾಗಿದೆ.