ETV Bharat / state

ರೆಸಾರ್ಟ್​ನಲ್ಲಿ ಡ್ರಗ್ಸ್​ ಮಾರಾಟವಾದ್ರೆ ಮಾಲೀಕರೇ ಹೊಣೆ, ಮಾಹಿತಿ ಕೊಟ್ಟರೆ ಬಹುಮಾನ: ಪ್ರವೀಣ್ ಸೂದ್ - latest crime news

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣ ಆಗಿರುವುದರಿಂದ ಹೋಂ ಸ್ಟೇ ಬಗ್ಗೆ ತೀವ್ರ ನಿಗಾ ಇರಿಸಿರುವ ರಾಜ್ಯ ಪೊಲೀಸರು, ಮಾದಕ ದ್ರವ್ಯ ಇರುವ ಬಗ್ಗೆ ಕೇಸ್ ಬಂದರೆ ಅದರ ಮಾಲೀಕರೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

We also keep an eye on home stays in the drugs mafia case: Praveen Sood
ಪೊಲೀಸ್ ಮಹಾನಿರ್ದೇಶಕರ ಪ್ರವೀಣ್ ಸೂದ್
author img

By

Published : Sep 14, 2020, 9:26 PM IST

ಚಿಕ್ಕಮಗಳೂರು: ಜಿಲ್ಲೆ ಒಂದು ಪ್ರವಾಸಿ ತಾಣವಾಗಿದ್ದರಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ. ಈ ಹಿನ್ನೆಲೆ ಜಿಲ್ಲೆಯಲ್ಲಿರುವ ಎಲ್ಲ ಹೋಂ ಸ್ಟೇಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಒಂದು ವೇಳೆ ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯ ಇರುವ ಬಗ್ಗೆ ಕೇಸ್ ಬಂದರೆ ಅದರ ಮಾಲೀಕರೇ ಹೊಣೆಯಾಗುತ್ತಾರೆ ಎಂದು ಪೊಲೀಸ್ ಮಹಾನಿರ್ದೇಶಕರ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.

ನಗರದ ಎಸ್​ಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಪೊಲೀಸರು ಕೂಡ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಪ್ರವಾಸಿ ತಾಣಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದು ಹೋಂ ಸ್ಟೇನಲ್ಲಿ ಮಾದಕ ದ್ರವ್ಯದ ಬಗ್ಗೆ ಕೇಸ್ ಬಂದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.

ಬಂದಂತಹ ಪ್ರವಾಸಿಗರು ಅವುಗಳನ್ನ ಬಳಸಿದರೆ ನಮಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದರೆ ಅಂತವರಿಗೆ ಬಹುಮಾನ ನೀಡಲಾಗುತ್ತದೆ. ಒಂದು ವೇಳೆ ಪ್ರಕರಣ ಮುಚ್ಚಿ ಹಾಕಿದರೂ ಕೂಡ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಮಹಾನಿರ್ದೇಶಕರ ಪ್ರವೀಣ್ ಸೂದ್

ಇನ್ನು ಡ್ರಗ್ಸ್‌ ಕಂಟ್ರೋಲ್ ಮಾಡೋದು ವಿಶೇಷ ವಿಂಗ್ ಮಾತ್ರವಲ್ಲ ಎಂದಿರುವ ಪ್ರವೀಣ್ ಸೂದ್, ಮಾದಕ ದ್ರವ್ಯದ ನಿಯಂತ್ರಿಸುವ ಕೆಲಸ ಪ್ರತಿಯೊಂದು ಪೊಲೀಸ್‌ ಠಾಣೆಯದ್ದು, ಯಾವ ಲಿಮಿಟ್‍ನಲ್ಲೂ ಡ್ರಗ್ಸ್ ಹಾವಳಿ ಇರಬಾರದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.