ETV Bharat / state

ಶೃಂಗೇರಿ ಶಾರದಾಂಬೆಗೆ ಜಲದಿಗ್ಬಂಧನ.. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಉರುಳಿಬಿದ್ದ ಮರ - Fallen Tree on Charmudi Ghat Road

ಮಳೆ ಅಬ್ಬರ- ಶೃಂಗೇರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತ-ದೇವಾಲಯದ ಪ್ಯಾರಲ್ ರಸ್ತೆ, ಪಾರ್ಕಿಂಗ್ ಪ್ರದೇಶಕ್ಕೆ ನುಗ್ಗಿದ ನೀರು- ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತ

ಶೃಂಗೇರಿ ಶಾರದಾಂಬೆಗೆ ಜಲದಿಗ್ಬಂಧನ
ಶೃಂಗೇರಿ ಶಾರದಾಂಬೆಗೆ ಜಲದಿಗ್ಬಂಧನ
author img

By

Published : Jul 10, 2022, 7:22 PM IST

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ತುಂಗಾ ನದಿಯ ಒಳ ಹರಿವಿನಲ್ಲಿ ಭಾರಿ ಹೆಚ್ಚಳ ಕಂಡು ಬರುತ್ತಿದೆ. ಶೃಂಗೇರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದು, ದೇವಾಲಯದ ಪ್ಯಾರಲ್ ರಸ್ತೆ, ಪಾರ್ಕಿಂಗ್ ಪ್ರದೇಶಕ್ಕೆ ನದಿ ನೀರು ನುಗ್ಗುತ್ತಿದೆ. ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶೃಂಗರಿಯ ಶಾರದಾಂಬೆ ದೇವಸ್ಥಾನಕ್ಕೆ ಜಲದಿಗ್ಬಂದನವಾಗಿದೆ.

ಶೃಂಗೇರಿ ಶಾರದಾಂಬೆಗೆ ಜಲದಿಗ್ಬಂಧನ

ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಸ್ಥಗಿತ: ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ರಸ್ತೆ ಮೇಲೆ ಮಣ್ಣು ಕುಸಿದಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಭಾರಿ ಪ್ರಮಾಣದಲ್ಲಿ ರಸ್ತೆ ಮೇಲೆ ಗುಡ್ಡದ ಮಣ್ಣು ಕುಸಿದಿದ್ದು, ಸತತ ಮಳೆಯಿಂದ ಮಣ್ಣು ತೆರವು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ನಾಲ್ಕೈದು ಮನೆಗಳ ಮೇಲೂ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಆತಂಕದಲ್ಲಿ ಗ್ರಾಮದ ಕೂಲಿ ಕಾರ್ಮಿಕ ಕುಟುಂಬಗಳು ಬದುಕುವಂತಾಗಿದೆ.

ಉರುಳಿ ಬಿದ್ದ ಮರ: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬೃಹತ್ ಮರ ಉರುಳಿ ಬಿದ್ದಿದ್ದು, ಚಾರ್ಮಾಡಿ ಘಾಟ್​ನ ಎಂಟನೇ ರಸ್ತೆಗೆ ಮರ ಬಿದ್ದಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಒಂದು ಕಿಲೋ ಮೀಟರ್​ಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿದೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳನ್ನ ಸಂಪರ್ಕಿಸುವ ಚಾರ್ಮಾಡಿ ಘಾಟ್ ಪ್ರಮುಖ ರಸ್ತೆಯಾಗಿದೆ. ಕುಟುಂಬಸ್ಥರ ಕಣ್ಣೆದುರೇ ಮನೆಗಳು ಕುಸಿದು ಬೀಳುತ್ತಿವೆ. ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಳೆ ಹೆಚ್ಚಾದಂತೆ ಮನೆಯ ಗೋಡೆ ಬಿರುಕು ಬಿಡುತ್ತಿದ್ದು, ಮನೆಯಿಂದ ಕುಟುಂಬಸ್ಥರು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ : ಹಲವೆಡೆ ರಸ್ತೆ ಸಂಪರ್ಕ ಕಡಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.