ETV Bharat / state

ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ: ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ತರಾಟೆ - chikkamagalur election bycott news

ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಬ್ಯಾನರ್ ತೆರವು ಮಾಡಲು ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಬ್ಯಾನರ್

author img

By

Published : Dec 2, 2020, 3:44 PM IST

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಬ್ಯಾನರ್ ತೆರವಿಗೆ ಬಂದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆದಿದೆ.

ಚುನಾವಣೆ ಬಹಿಷ್ಕರಿಸಿದ ಬ್ಯಾನರ್​ ತೆಗೆಯಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳನ್ನೇಕೆ ತೆರವು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಜೊತೆಗೆ ಹಿಗ್ಗಾಮುಗ್ಗಾ ತರಾಟೆಗೂ ತೆಗೆದುಕೊಂಡಿದ್ದಾರೆ. ನೀವು ಸಂಬಳಕ್ಕೆ ಹೋರಾಡ್ತಿರಾ, ನಾವು ಬದುಕಿಗಾಗಿ ಹೋರಾಡ್ತೀವಿ ಎಂದು ಬ್ಯಾನರ್ ತೆರವಿಗೆ ಬಂದಿದ್ದ ಆರ್.ಐ. ಹಾಗೂ ಪಿ.ಡಿ.ಓ ಮೇಲೆ ಜನರು ಕೆಂಡಾಮಂಡಲರಾದರು. ಇದೇ ವೇಳೆ ಹುಲಿ ಯೋಜನೆ, ಬಫರ್ ಝೋನ್​, ಕಸ್ತೂರಿ ರಂಗನ್ ವರದಿ ವಿರುದ್ಧವೂ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಓದಿ: ವಿನಯ್ ಕುಲಕರ್ಣಿಗೆ ರಾಜಾತಿಥ್ಯ ಆರೋಪ.. ಹಿಂಡಲಗಾ ಜೈಲು ಅಧೀಕ್ಷಕರು ಹೀಗಂದರು..

ಈ ಭಾಗದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳನ್ನು ಗ್ರಾಮಸ್ಥರು ಹಾಕಿದ್ದಾರೆ. ಇಂದು ಬ್ಯಾನರ್ ತೆರವಿಗೆ ಬಂದಿದ್ದ ಅಧಿಕಾರಿಗಳನ್ನು ತಡೆದು ಅವರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಸಿ ವಾಪಸ್​​ ಕಳುಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.