ETV Bharat / state

ಕಾಫಿನಾಡಲ್ಲಿ ನೆತ್ತಿ ಸುಡ್ತಿದ್ದಾನೆ ಸೂರ್ಯ, ರಣಬಿಸಿಲಿಗೆ ಜನ ಸುಸ್ತೋ ಸುಸ್ತು! - undefined

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಕಲಬುರ್ಗಿ, ಬಳ್ಳಾರಿ, ಮಂಗಳೂರು, ರಾಯಚೂರು ಹಾಗೂ ಉತ್ತರ ಕರ್ನಾಟಕದ ಇತರ ಜಿಲ್ಲೆಗಳನ್ನು ಮೀರಿಸುವಂತಹ ಧಗೆ ಇದ್ದು, ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ.

chikkamagaluru district
author img

By

Published : Jun 2, 2019, 5:47 PM IST

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಭಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಧಗೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು ಮಲೆನಾಡು ಜಿಲ್ಲೆ. ಸಾಮಾನ್ಯವಾಗಿ ತಣ್ಣನೆಯ ವಾತಾವರಣವನ್ನು ಹೊಂದಿದ್ದು, ತಂಪಾದ ಗಾಳಿಯ ಮಧ್ಯೆ ಜನರು ಜೀವನ ಮಾಡುತ್ತಿದ್ದರು. ಆದರೆ ಈ ಭಾರಿ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಇತರ ಜಿಲ್ಲೆಗಳನ್ನು ಮೀರಿಸುವಂತಹ ಬಿಸಿಲಿದ್ದು, ಜನರು ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಚಿಕ್ಕಮಗಳೂರಲ್ಲಿ ಹೆಚ್ಚಿದ ತಾಪಮಾನ,ಹೈರಾಣಾದ ಜನ

ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ, ಕಾಫಿ ತೋಟಗಳ ನಾಶದಿಂದ ಮಳೆ ಸರಿಯಾಗಿ ಆಗದ ಪರಿಣಾಮ ಹವಾಮಾನದಲ್ಲಿ ವೈಪರೀತ್ಯ ಕಂಡು ಬರುತ್ತಿದ್ದು, ಜನರು ಮನೆಯ ಹೊರಗೂ ಇರಲಾರದೆ ಮನೆಯ ಒಳಗೂ ಇರಲಾರದೆ ಬಿಸಿಲಿನಿಂದ ಬೆಂದು ಹೋಗುತ್ತಿದ್ದು, ಎಳನೀರು, ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಹವಾಮಾನ ವೈಪರೀತ್ಯ ಪ್ರಕೃತಿಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ನದಿಗಳು, ಹಳ್ಳ ಕೊಳ್ಳಗಳಲ್ಲಿ ನೀರು ಮಾಯವಾಗಿ ಹೋಗಿದೆ. ದನ ಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಮೇವು ಕೂಡ ಸಿಗುತ್ತಿಲ್ಲ. ಮಲೆನಾಡು ಎಂದೇ ಖ್ಯಾತಿ ಗಳಿಸಿರುವ ಜಿಲ್ಲೆ, ಈಗ ಬಯಲು ಸೀಮೆಯಾಗಿದ್ಯೇನೋ ಎಂಬಂತೆ ಭಾಸವಾಗುತ್ತಿದೆ.

Intro:R_Kn_Ckm_02_02_Record temprature_Rajkumar_Ckm_pkg_7202347Body:

ಚಿಕ್ಕಮಗಳೂರು :-

ಕಾಫೀನಾಡು ಚಿಕ್ಕಮಗಳೂರಿನಲ್ಲಿ ಈ ಭಾರೀ ಅತಿ ಹೆಚ್ಚಿನ ಬಿಸಿಲಿನ ಧಗೆ ಗೆ ಇಲ್ಲಿನ ಮಲೆನಾಡಿನ ಜನರು ಬೆಂದೂ ಹೋಗುತ್ತಿದ್ದಾರೆ.ಈ ವರ್ಷ ಅತಿ ಹೆಚ್ಚು ಬಿಸಿಲನ್ನೂ ಮಲೆನಾಡಿನ ಜನರು ನೋಡುತ್ತಿದ್ದು ಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಕಂಗಾಲಾಗಿದ್ದಾರೆ,ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ....

ಹೌದು ಕಾಫೀ ನಾಡು ಚಿಕ್ಕಮಗಳೂರು ಮಲೆನಾಡು ಜಿಲ್ಲೆ. ಸಾಮಾನ್ಯವಾಗಿ ತಣ್ಣನೆಯಾ ವಾತವರಣವನ್ನೂ ಹೊಂದಿದ್ದು ತಂಪಾದ ಗಾಳಿಯ ಮಧ್ಯೆ ಇಲ್ಲಿನ ಜನರು ಜೀವನ ಮಾಡುತ್ತಿದ್ದರು, ಆದರೇ ಈ ಭಾರೀ ಜಿಲ್ಲೆಯಲ್ಲಿ ಕಲಬುರ್ಗಿ, ಬಳ್ಳಾರಿ, ಮಂಗಳೂರು, ರಾಯಚೂರು ಹಾಗೂ ಉತ್ತರ ಕರ್ನಾಟಕದ ಇತರ ಜಿಲ್ಲೆಗಳನ್ನು ಮೀರಿಸುವಂತಹ ಬಿಸಿಲು ಇಲ್ಲಿ ಬಂದಿರೋದರಿಂದಾ ಜನರು ಬಸಿಲಿನ ಧಗೆಯಿಂದಾ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಅರಣ್ಯ ವಿಪರೀತ ನಾಶ, ಮತ್ತು ಕಾಫೀ ತೋಟಗಳ ನಾಶದಿಂದಾ ಇತ್ತೀಚೀನ ದಿನಗಳಲ್ಲಿ ಮಳೆ ಸರಿಯಾಗಿ ಆಗದ ಪರಿಣಾದಿಂದಾಗಿ ಈ ಹವಾಮಾನದಲ್ಲಿ ವೈಪರಿತ್ಯ ಕಂಡೂ ಬರುತ್ತಿದ್ದು, ಜನರು ಮನೆಯ ಹೊರಗೂ ಇರಲಾರದೇ ಮನೆಯ ಒಳಗೂ ಇರಲಾರದೇ ಬಿಸಿಲಿನಿಂದಾ ಬೆಂದೂ ಹೋಗುತ್ತಿದ್ದಾರೆ.

ಈ ಹವಾಮಾನದ ವೈಪರಿತ್ಯ ಪ್ರಕೃತಿಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ನದಿಯ ತೊರೆಗಳು ಹಳ್ಳಕೊಳ್ಳಗಳಲ್ಲಿ ನೀರು ಮಾಯವಾಗಿ ಹೋಗಿದೆ. ಧನ ಕರುಗಳಿಗೆ ಕುಡಿಯಲು ಸರಿಯಾಗಿ ನೀರು ಸಿಗುತ್ತಿಲ್ಲ, ಮೇವು ಸಿಗುತ್ತಿಲ್ಲ,ಇಷ್ಟು ದಿನ ಪಕ್ಕಾ ಮಲೆನಾಡು ಆಗಿದ್ದ ಈ ಜಿಲ್ಲೆ ಈಗ ಬಯಲು ಸೀಮೆಯಾಗಿದೇ ಏನೋ ಎಂಬಂತೆ ಎಲ್ಲರಿಗೂ ಭಾಸವಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟವೂ ದಿನದಿಂದಾ ದಿನಕ್ಕೆ ಸಂಪೂರ್ಣ ಕುಂಠಿತ ಆಗುತ್ತಿದೆ. ಪರಿಸರ ನಾಶ,ಅರಣ್ಯ ನಾಶ, ದಿನದಿಂದಾ ದಿನಕ್ಕೆ ಹೆಚ್ಚುತ್ತಿರುವ ರೆಸಾರ್ಟ್ ಗಳ ಸಂತತಿ,ಇದರಿಂದ ಮರಗಳ ಮತ್ತು ಅರಣ್ಯಗಳ ಮಾರಣ ಹೋಮ ಇದಕ್ಕೆ ಪ್ರಮುಖ ಕಾರಣವಾಗಿ ಇಲ್ಲಿ ಕಾಣುತ್ತಿದೆ.

ಒಟ್ಟಾರೆಯಾಗಿ ಇಷ್ಟು ದಿನ ತಂಪಾದ ತಣ್ಣನೆಯ ಗಾಳಿಯಲ್ಲಿ ಸ್ವಂಚ್ಚದ ಜೀವನ ಮಾಡುತ್ತಿದ್ದ ಮಲೆನಾಡು ಜನರು ಈಗ ಬಿರು ಬಿಸಿಲಿನಲ್ಲಿ ಸುಟ್ಟು ಹೋಗುತ್ತಿದ್ದಾರೆ,ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತೋ ಮಳೆಗಾಲ ಎಂದೂ ಪ್ರಾರಂಭ ಆಗುತ್ತೋ ಎಂದೂ ಚಿಕ್ಕಮಗಳೂರಿನ ಜನರು ಮೋಡದತ್ತ ನೋಡುತ್ತಾ ದಿನವನ್ನೂ ಮುಂದಕ್ಕೂತ್ತಿದ್ದಾರೆ......

byte:-1 ಚಂದ್ರು,,,,,,,,,ಎಳನೀರು ವ್ಯಾಪಾರಿ

Conclusion:ರಾಜಕುಮಾರ್..
ಈ ಟಿವಿ ಭಾರತ್,,,
ಚಿಕ್ಕಮಗಳೂರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.