ಚಿಕ್ಕಮಗಳೂರು : ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕಡೂರು ತಾಲೂಕಿನ ವೇದಾಕೃಷ್ಣ ಮೂರ್ತಿ ರಾಜ್ಯ ಸರ್ಕಾರ ನೀಡುವ 2019ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವೇದ ಕೃಷ್ಣಮೂರ್ತಿ ಕಡೂರಿನ ಉದ್ಯಮಿ ಎಸ್‌ಜಿಕೆ ಮೂರ್ತಿ ಮತ್ತು ಚೆಲುವಾಂಬ ದೇವಿ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಐಪಿಎಲ್ ನಡೆಯುತ್ತಿರುವ ಹಿನ್ನೆಲೆ ದುಬೈನಲ್ಲಿದ್ದಾರೆ.
ಪ್ರಶಸ್ತಿಯಿಂದ ಆಕೆಯ ಜವಾಬ್ದಾರಿ ಹೆಚ್ಚಿದೆ, ಹೆಚ್ಚಿನ ಸಾಧನೆಗೆ ಸ್ಫೂರ್ತಿ ದೊರೆತಿದೆ ಎಂದು ವೇದಾ ಅವರ ತಂದೆ ಎಸ್‌ಜಿಕೆ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.