ಚಿಕ್ಕಮಗಳೂರು : ಗಣರಾಜ್ಯೋತ್ಸವ ವೇದಿಕೆಯಲ್ಲಿ 'ಕ್ರೆಡಿಟ್' ತೆಗೆದುಕೊಳ್ಳಲು ರಾಜಕೀಯ ಪಕ್ಷಗಳ ಮುಖಂಡರುಗಳು ಕಿತ್ತಾಟ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಗಣರಾಜ್ಯೋತ್ಸವದ ವೇಳೆ ರಾಜಕೀಯ ನಾಯಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಶಾಸಕ ಕುಮಾರಸ್ವಾಮಿ ಅವರನ್ನು ಬಿಜೆಪಿ ಮುಖಂಡ ವೆಂಕಟ ಸುಬ್ಬಯ್ಯ ಹೊಗಳಿ ಅಟ್ಟಕ್ಕೇರಿಸಿದರು.
ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದು ಬಿಜೆಪಿ ನಾಯಕರು. ಭದ್ರಾ ಮೇಲ್ದಂಡೆ ಯೋಜನೆ ರದ್ದಾಗಿದ್ದು ಕೂಡ ಬಿಜೆಪಿಯಿಂದಲೇ ಎಂದು ಹೇಳಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆಗ ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದ ಜೆಡಿಎಸ್, ಕಾಂಗ್ರೆಸ್ ಮುಖಂಡರು ಶಾಸಕ ಕುಮಾರಸ್ವಾಮಿ, ಎ ಸಿ ನಾಗರಾಜ್ ಮುಂಭಾಗದಲ್ಲೇ ಕಿತ್ತಾಟ, ತಳ್ಳಾಟ ನಡೆದಿದೆ. ಸುಂದರ ಕಾರ್ಯಕ್ರಮವಾಗಬೇಕಿದ್ದ ಸಮಾರಂಭ ಗೊಂದಲದ ಗೂಡಾಗಿದೆ.
ಓದಿ: ಧ್ವಜಾರೋಹಣದ ವೇಳೆ ರಾಷ್ಟ್ರಧ್ವಜವನ್ನ ತಲೆಕೆಳಗಾಗಿ ಹಾರಿಸಿದ ಸಚಿವರು..!