ETV Bharat / state

ಬಾಕ್ಸ್‌ ಚರಂಡಿಗಳ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ: ಗ್ರಾಮಸ್ಥರಿಂದ ಆಕ್ರೋಶ - Chikkamagaluru unscientific work of drainage syastem

ಚರಂಡಿ ಅಗಲವಾಗಿ ಮಾಡಿದರೇ ಮಳೆಯ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ, ಚರಂಡಿ ಎತ್ತರ ಮಾತ್ರ ಇದ್ದು, ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಸೇತುವೆಗಳು ಕೂಡ ಸರಿಯಾಗಿ ಗುಣಮಟ್ಟದಿಂದ ಕೂಡಿಲ್ಲ..

chikkamagaluru
ಕಾಮಗಾರಿ ಅವೈಜ್ಞಾನಿಕ ಆರೋಪ
author img

By

Published : Feb 15, 2021, 5:48 PM IST

Updated : Feb 15, 2021, 6:18 PM IST

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬಾಕ್ಸ್ ಚರಂಡಿಗಳ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಈ ಭಾಗದಲ್ಲಿ 400 ಇಂಚು ಮಳೆಯಾಗುತ್ತಿದೆ. ನಿರಂತರ ಸುರಿಯುವ ಮಳೆಗೆ ಈ ಚರಂಡಿ ಒಡೆದು ಹೋಗುವ ಸಾಧ್ಯತೆ ಇದೆ. ಕಳೆದ ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು, ಅದು ಕೂಡ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಕಾಮಗಾರಿ ಅವೈಜ್ಞಾನಿಕ ಆರೋಪ

ಚರಂಡಿ ಅಗಲವಾಗಿ ಮಾಡಿದರೇ ಮಳೆಯ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ, ಚರಂಡಿ ಎತ್ತರ ಮಾತ್ರ ಇದ್ದು, ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಸೇತುವೆಗಳು ಕೂಡ ಸರಿಯಾಗಿ ಗುಣಮಟ್ಟದಿಂದ ಕೂಡಿಲ್ಲ.

ಕಳೆದು ಒಂದು ತಿಂಗಳಿಂದ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿರುವುದರಿಂದ ಅಂಗಡಿಗಳಿಗೆ ಸಾರ್ವಜನಿಕರು ಕೂಡ ಬರುತ್ತಿಲ್ಲ. ಈಗಾಗಲೇ ಕೊರೊನಾ ಸಮಯದಲ್ಲಿ ಒಂದು ತಿಂಗಳ ಕಾಲ ಅಂಗಡಿಗಳು ಬಂದ್ ಮಾಡಿ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

Last Updated : Feb 15, 2021, 6:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.