ಚಿಕ್ಕಮಗಳೂರು : ಅಕ್ರಮವಾಗಿ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ತಂದೆ - ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಈದ್ಗಾ ನಗರದಲ್ಲಿ ನಡೆದಿದೆ.
ವಿಜಯಮ್ಮ (40) ಬಂಧಿತ ಮಹಿಳೆ. ಇವರ ಬಳಿ ಇದ್ದ ಸುಮಾರು 22 ಸಾವಿರ ರೂ. ಬೆಲೆ ಬಾಳುವ 960 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ನಂತರ ಆಕೆ ನೀಡಿದ ಮಾಹಿತಿ ಆಧರಿಸಿ ಆಕೆಯ ತಂದೆ ಜಯಣ್ಣ (65) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಈದ್ಗಾ ನಗರದಲ್ಲಿ ಗಾಂಜಾವನ್ನು ವ್ಯಕ್ತಿಯೋರ್ವ ಚಿಕ್ಕ - ಚಿಕ್ಕದಾಗಿ ಪ್ಯಾಕ್ ಮಾಡಿ ಮಾರಾಟ ಮಾಡಲು ದಾಸ್ತಾನು ಮಾಡಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ಬಳಿಕ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.