ETV Bharat / state

ದತ್ತಪೀಠಕ್ಕೆ ಸಾಗುವ ರಸ್ತೆಯುದ್ದಕ್ಕು ಮೊಳೆ ಹಾಕಿದ್ದ ಪ್ರಕರಣ: ಇಬ್ಬರ ಬಂಧನ - ರಸ್ತೆಯಲ್ಲಿ ಮೊಳೆ ಚೆಲ್ಲಿದ ಪ್ರಕರಣ

ದತ್ತ ಜಯಂತಿಯಂದು ದತ್ತ ಪೀಠಕ್ಕೆ ಸಾಗುವ ರಸ್ತೆಯುದ್ದಕ್ಕೂ ಮೊಳೆ ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Etv Bharat
ದತ್ತಪೀಠಕ್ಕೆ ಸಾಗುವ ರಸ್ತೆಯುದ್ದಕ್ಕು ಮೊಳೆ ಚೆಲ್ಲಿದ ಪ್ರಕರಣ
author img

By

Published : Dec 16, 2022, 1:18 PM IST

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಇತ್ತೀಚೆಗೆ ನಡೆದ ದತ್ತ ಜಯಂತಿ ಸಂದರ್ಭದಲ್ಲಿ ದತ್ತಪೀಠಕ್ಕೆ ಸಾಗುವ ರಸ್ತೆಯುದ್ದಕ್ಕು ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ದುಬೈನಗರ ಬಡಾವಣೆಯ ಮೊಹಮ್ಮದ್ ಶಹಬಾಸ್ ಮತ್ತು ವಾಹಿದ್ ಹುಸೇನ್ ಬಂಧಿತ ಆರೋಪಿಗಳು.

ದತ್ತ ಜಯಂತಿಗೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ದುಷ್ಕೃತ್ಯ ಎಸಗಿದ್ದಾರೆ. ರಸ್ತೆಯ ಉದ್ದಕ್ಕೂ ಅನೇಕ ಕಡೆ ಚೂಪಾದ ಮೊಳೆಗಳನ್ನು ಚೆಲ್ಲಿದ್ದರು. ಇದರಿಂದ ಅನೇಕ ವಾಹನಗಳು ಪಂಕ್ಚರ್ ಆಗಿದ್ದವು. ವಿಷಯ ತಿಳಿದ ಬಜರಂಗದಳ ಕಾರ್ಯಕರ್ತರು ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಮೊಳೆಗಳನ್ನು ತೆರವುಗೊಳಿಸಿದ್ದರು.

ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದರು. ಪೊಲೀಸರು ನಗರದ ಹಾರ್ಡ್ ವೇರ್ ಒಂದರಿಂದ ನಾಲ್ಕು ಕೆ.ಜಿ ಮೊಳೆ ಖರೀದಿಸಿದ ಮಾಹಿತಿಯ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ದತ್ತ ಜಯಂತಿ ಉತ್ಸವ ಸಂಪನ್ನ: ಸಾವಿರಾರು ಭಕ್ತರಿಂದ ಪಾದುಕೆ ದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.