ETV Bharat / state

ಚಿಕ್ಕಮಗಳೂರಲ್ಲಿ ನಕಲಿ ನೋಟು ಚಲಾವಣೆ ಮಾಡ್ತಿದ್ದ ಇಬ್ಬರ ಬಂಧನ: ಕ್ಯಾಟ್​​-ಐ ಹರಳು ಸೇರಿ ಖೋಟಾ ನೋಟು ವಶಕ್ಕೆ - Cat eye stone

ಹಲವು ಜಿಲ್ಲೆಗಳಲ್ಲಿ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ ನಕಲಿ ನೋಟುಗಳು ಸೇರಿದಂತೆ ಪುರಾತನ ಕಾಲದ ಹರಳೊಂದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

two-arrested-for-printing-and-distributes-fake-currency-note
ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರ ಬಂಧನ
author img

By

Published : Aug 24, 2021, 1:40 PM IST

ಚಿಕ್ಕಮಗಳೂರು: ನಕಲಿ ನೋಟು ಚಲಾವಣೆ ಜಾಲವೊಂದನ್ನು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ. ನಕಲಿ ಹಾಗೂ ಅಸಲಿ ನೋಟುಗಳು ಸೇರಿದಂತೆ ಬೆಲೆ ಬಾಳುವ ಪುರಾತನ ಕ್ಯಾಟ್-ಐ ರತ್ನದ ಹರಳೊಂದನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ 5.57 ಲಕ್ಷ ರೂ.ನಷ್ಟು 500 ಮುಖಬೆಲೆಯ ನಕಲಿ ನೋಟುಗಳು ಹಾಗೂ 5 ಲಕ್ಷ ರೂ. ಅಸಲಿ ನೋಟುಗಳು, 3 ಕಾರು, 5 ಮೊಬೈಲ್, ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಪ್ರಿಂಟರ್, ಕಂಪ್ಯೂಟರ್, ಪೆನ್​​​ಡ್ರೈವ್, ಪೇಪರ್ ಇತ್ಯಾದಿ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

Cat eye stone
ಕ್ಯಾಟ್​​-ಐ ಹರಳು

ಆರೋಪಿಗಳ ಬಳಿ 510.60 ಕ್ಯಾರೆಟ್ ಪ್ರಮಾಣೀಕೃತ ಕ್ಯಾಟ್-ಐ ರತ್ನದ ಹರಳು ಸಹ ಪತ್ತೆಯಾಗಿದ್ದು, ಅದನ್ನು 2019ರಲ್ಲಿ ಶಿವಮೊಗ್ಗದ ಓರ್ವ ವ್ಯಕ್ತಿಯಿಂದ ಖರೀದಿಸಿರುವುದಾಗಿ ಹೇಳಿದ್ದಾರೆ. ಆದರೆ ಅವರಿಗೆ ಮೋಸಮಾಡಿ ತೆಗೆದುಕೊಂಡು ಹೋಗಿರುವುದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.

2020ರಲ್ಲಿ ತಪ್ಪಿಸಿಕೊಂಡಿದ್ದ ಕಳ್ಳರು

ಈ ಹರಳು ಅಂದಾಜು 50 ಲಕ್ಷದಿಂದ 1 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ತಿಳಿದುಬಂದಿದೆ. ಇದೇ ಗ್ಯಾಂಗ್‌ನಲ್ಲಿದ್ದ ಇತರೆ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು 2020ರಲ್ಲಿ ಬಂಧಿಸಿ 2.4 ಲಕ್ಷ ಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದರು.

ಬಂಧಿತ ಆರೋಪಿಗಳ ಪೈಕಿ ಒಬ್ಬಾತ ಮನೆಗಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಪತ್ರಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪವೂ ಆತನ ಮೇಲಿದೆ. ಆತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ 5 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಈತ ತನ್ನ ಸಹಚರರೊಂದಿಗೆ ಸೇರಿ ಕೇರಳ ರಾಜ್ಯದಲ್ಲಿ ಉನ್ನತಮಟ್ಟದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ತಿಳಿದುಬಂದಿದೆ. ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಮಗಳ ಸಹವಾಸಕ್ಕೆ ಬರ್ಬೇಡ ಎಂದ ಯುವತಿ ತಂದೆಯನ್ನೇ ಕೊಂದ ಪಾಗಲ್ ಪ್ರೇಮಿ: ನೆಲಮಂಗಲದಲ್ಲಿ ಬರ್ಬರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.