ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರವಾಸಿಗರ ಜೀಪ್ವೊಂದು ಆಕಸ್ಮಿಕವಾಗಿ 300 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಅವಘಡ ಜರುಗಿದ ಸಮಯದಲ್ಲಿ ಜೀಪ್ನಲ್ಲಿ ಯಾರೂ ಇರಲಿಲ್ಲ.
ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆಯ ಸಮೀಪವಿರುವ ಕ್ಯಾತನ ಮಕ್ಕಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಶೃಂಗೇರಿ ಮೂಲದ ಪ್ರವಾಸಿಗರು ಕ್ಯಾತನ ಮಕ್ಕಿಗೆ ಬಂದಿದ್ದರು. ಜೀಪ್ ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಕೆಳಗೆ ಇಳಿದಾಗ ಜೀಪ್ನ ಗೇರ್ ಸ್ಲಿಪ್ ಆಗಿ ಈ ಘಟನೆ ನಡೆದಿದೆ.
ಇನ್ನು ಈ ಜೀಪ್ನಲ್ಲಿ ಸುಮಾರು ಐದು ಜನರು ಬಂದಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಆಗದೇ ಎಲ್ಲರ ಪ್ರಾಣ ಉಳಿದಿದೆ. ಕೊರೊನಾ ವೈರಸ್ ಭೀತಿಯಿಂದ ಪ್ರವಾಸಿಗರಿಗೆ ಪ್ರವಾಸಿ ತಾಣಗಳಿಗೆ ಹೋಗಲು ಅವಕಾಶವಿಲ್ಲ ಆದರೂ ಇವರು ಹೇಗೆ ಬಂದರು ಎಂಬ ಪ್ರಶ್ನೆ ಕಾಡುತ್ತಿದೆ.
ಇನ್ನು ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.