ETV Bharat / state

ಚಿಕ್ಕಮಗಳೂರಿನ ರೆಸಾರ್ಟ್​ಗಳಿಗೆ ಪ್ರವಾಸಿಗರ ಆಗಮನ: ಸ್ಥಳೀಯರ ಆರೋಪ - ಲಾಕ್​ಡೌನ್ ಆದೇಶ

ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರ ಸುತ್ತಲಿನ ರೆಸಾರ್ಟ್​ ಹಾಗೂ ಹೋಂ ಸ್ಟೇಗಳಿಗೆ ಬೆಂಗಳೂರಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಖಾಸಗಿ ವಾಹನಗಳು ಸಂಚರಿಸುತ್ತಿವೆ.

Tourist arrivals to the resort
ರೆಸಾರ್ಟ್​ಗೆ ಪ್ರವಾಸಿಗರ ಆಗಮನ
author img

By

Published : Mar 31, 2020, 4:49 PM IST

ಚಿಕ್ಕಮಗಳೂರು: ದೇಶಾದ್ಯಂತ ಲಾಕ್​ಡೌನ್​ ಆದೇಶವಿದ್ದರೂ ಜಿಲ್ಲೆಯ ಖಾಸಗಿ ರೆಸಾರ್ಟ್​ಗಳಿಗೆ ಇನ್ನೂ ಅರ್ಥವಾದಂತೆ ಕಾಣುತ್ತಿಲ್ಲ ಎಂದು ಅನುಮಾನ ಮೂಡುತ್ತಿದೆ.

Tourist arrivals to the resort
ರೆಸಾರ್ಟ್​ಗೆ ಪ್ರವಾಸಿಗರ ಆಗಮನ

ಬೆಂಗಳೂರಿನಿಂದ ಕೆಲ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇಲ್ಲಿನ ರೆಸಾರ್ಟ್​ಗಳಲ್ಲಿ ತಂಗುತ್ತಿದ್ದಾರೆ ಎಂದು ಸ್ಥಳಿಯರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪಾಸಿಂಗ್​ ನಂಬರ್​​ನ ಕೆಲ ಖಾಸಗಿ ವಾಹನಗಳು ಇಲ್ಲಿ ಕಂಡು ಬಂದಿದ್ದು, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಜಿಲ್ಲೆಯ ಕೊಟ್ಟಿಗೆಹಾರ ಸುತ್ತಮುತ್ತಲು ಇರುವ ರೆಸಾರ್ಟ್, ಹೊಂ ಸ್ಟೇಗಳಿಗೆ ಶ್ರೀಮಂತರು ಆಗಮಿಸುತ್ತಿದ್ದಾರೆ. ಇವರೆಲ್ಲ ಪ್ರವಾಸಿಗರು ಇರಬಹುದು ಎಂಬ ಶಂಕೆಯನ್ನು ಇಲ್ಲಿನ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.