ಚಿಕ್ಕಮಗಳೂರು : ಕಾಫಿನಾಡಿನಲ್ಲಿ ವೈರಲ್ ಆದ ಹುಲಿ ಬಂತು ಹುಲಿ (tigers found in chikkamagalore) ಅನ್ನೋ ಗಾಸಿಪ್ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ಜೋಡಿ ಹುಲಿಗಳನ್ನ ವಿಡಿಯೋ (chikkamagalore tiger viral video) ಎಲ್ಲರಲ್ಲೂ ಪ್ರಾಣ ಭಯ ಹುಟ್ಟು ಹಾಕಿತ್ತು.
ಅಷ್ಟಕ್ಕೂ ರೋಡ್ ಮೇಲೆ ಕಂಡ ಎರಡು ಟೈಗರ್ ಗಾಸಿಪ್ ಅಸಲಿಯತ್ತೇನು ಅಂತಾ ಹುಡುಕಿಕೊಂಡ ಹೋದ ಅರಣ್ಯ ಇಲಾಖೆ ಪೊಲೀಸರಿಗೆ ಸಿಕ್ಕಿದ್ದು, ಇಬ್ಬರು ಖರ್ತನ್ನಾಕ್ ಆಸಾಮಿಗಳು.
ರಸ್ತೆಯಲ್ಲಿ ನಿರ್ಭೀತಿಯಿಂದ ವಾಕ್ ಮಾಡ್ಕೊಂಡ್ ಬರ್ತಿರೋ ಜೋಡಿ ಹುಲಿಗಳು. ಅಷ್ಟೇ ನಿರ್ಭೀತಿಯಿಂದಲೇ ಕಾರಿನಲ್ಲಿ ಕುಳಿತು ಹುಲಿ ವಿಡಿಯೋ ಸೆರೆ ಹಿಡೀತಿರೋ ವ್ಯಕ್ತಿಗಳು.
ಇಂತಹದ್ದೊಂದು ವಿಡಿಯೋ ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈರಲ್ ಆಗಿತ್ತು. ಅಲ್ಲದೆ, ಈ ಬಗ್ಗೆ ವ್ಯಕ್ತಿಯೊಬ್ಬ ಕಾಫಿನಾಡಿನ ಜನರ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಭಯ ಹುಟ್ಟಿಸಿದ.
ಹುಲಿಗಳನ್ನು ಕಣ್ಣಾರೆ ಕಂಡೆ ಅಂತಾ ವ್ಯಕ್ತಿಯೊಬ್ಬ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದ. ಇದರ ಸತ್ಯಾಸತ್ಯತೆಯನ್ನ ಹುಡುಕಾಡಿದ ಅಧಿಕಾರಿಗಳಿಗೆ ಈ ಹುಲಿಗಳು ಕ್ಯಾಪ್ಚರ್ ಆಗಿದ್ದ ಹಳೆಯ ವಿಡಿಯೋವನ್ನ ಪತ್ತೆಯಾಗಿತ್ತು. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳಿಗೆ ವಾಯ್ಸ್ ರೆಕಾರ್ಡ್ ಜೊತೆಗೆ ಹಳೆಯ ವಿಡಿಯೋವನ್ನ ನೀಡಿದ್ರು.
ಕೂಡಲೇ ಅಲರ್ಟ್ ಆದ ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳು ಸುದ್ದಿ ಹಬ್ಬಿಸಿದ ಸಮೀರ್ ಹುಸೇನ್ ಹಾಗೂ ಸೈಯದ್ ಹುಸೇನ್ ಎಂಬುವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಪ್ರಕರಣ ದಾಖಲಾಗುತ್ತಿದ್ದಂತೆ ಚಿಕ್ಕಮಗಳೂರಿನ ಸೆನ್ ಠಾಣೆಗೆ ಇಬ್ಬರನ್ನ ಕರೆತಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
ಹುಲಿ ಬಂತು ಅಂತಾ ಸುಳ್ಳು ಹೇಳಿದ್ಯಾಕೆ ಗೊತ್ತಾ?: ಅಷ್ಟಕ್ಕೂ ಹಳೆಯದಾದ ಎಲ್ಲಿಯದ್ಯೋ ಹುಲಿ ವಿಡಿಯೋ ಇಟ್ಕೊಂಡು ಈಗ್ಯಾಕೆ ಸುಳ್ಳು ಸುದ್ದಿ ಹಬ್ಬಿಸಿದ್ರು ಅನ್ನೋ ಪ್ರಶ್ನೆ ಕೂಡ ಹಲವರನ್ನ ಕಾಡಿತ್ತು. ಅಂದಾಗೆ ಸಮೀರ್ ಗಾಲ್ಫ್ ಕ್ಲಬ್‌ನ ಸದಸ್ಯ. ಹೋಮ್ ಸ್ಟೇಗೆ ಪ್ರವಾಸಿಗರನ್ನ ಸೆಳೆಯಲು ಈ ರೀತಿಯಾಗಿ ಸುಳ್ಳು ಸುದ್ದಿಯನ್ನ ಹಬ್ಬಿಸಿರುವುದಾಗಿ ತಿಳಿದು ಬಂದಿದೆ.
ಸದ್ಯ ಇಲ್ಲದ ಹುಲಿಯನ್ನ ಇದೆ ಅಂತಾ ಬಿಂಬಿಸಿ ಗ್ರಾಹಕರನ್ನ ಸೆಳೆಯೋದು, ಜನರನ್ನ ಭಯ ಬೀಳಿಸೋದು ಸರಿಯಾದ ಕ್ರಮವಲ್ಲ ಅಂತಾ ಹೋಮ್ ಸ್ಟೇ ಅಶೋಷಿಯನ್ ಅಭಿಪ್ರಾಯ ಪಟ್ಟಿದೆ. ಇನ್ನು ಬೇರೆ ರಾಜ್ಯದಲ್ಲಿ ಪ್ರತ್ಯಕ್ಷವಾಗಿದ್ದ ಜೋಡಿ ಹುಲಿ ಗಾಸಿಪ್ ಕಲಿಗಳಿಂದ ಕಾಫಿನಾಡಿಗೆ ಬಂದಿದ್ವು. ಈಗ ಮತ್ತೆಲ್ಲಿಗೆ ಹೋಗುತ್ತೋ ಅಂತಾ ಕಾಯ್ದು ನೋಡಬೇಕು.