ಚಿಕ್ಕಮಗಳೂರು : ಕರ್ತವ್ಯ ಲೋಪ ಹಿನ್ನೆಲೆ ಓರ್ವ ಎಎಸ್ಐ ಮತ್ತು ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಆದೇಶ ಹೊರಡಿಸಿದ್ದಾರೆ.
ಎಎಸ್ಐ ಶಿವಕುಮಾರ್, ಪೇದೆಗಳಾದ ಶಿವಾಜಿ, ಶಿವು ಸಸ್ಪೆಂಡ್ ಆದ ಸಿಬ್ಬಂದಿಯಾಗಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಮೂವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೊಕ್ಸೊ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಠಾಣೆಯಿಂದ ಪರಾರಿಯಾಗಿದ್ದನು. ಈ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ ಈ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ: ಹಿರಿಯ ಅರಣ್ಯಾಧಿಕಾರಿ ಕಿರುಕುಳ.. ‘ಲೇಡಿ ಸಿಂಗಂ' ಖ್ಯಾತಿಯ ಆರ್ಎಫ್ಓ ದೀಪಾಲಿ ಆತ್ಮಹತ್ಯೆ