ETV Bharat / state

ಮೋದಿಗಾಗಿ ವಾಪಸ್ ಬನ್ನಿ: ಬಿಜೆಪಿ ಬಿಟ್ಟು ಹೋದವರಿಗೆ ಬಹಿರಂಗ ಆಹ್ವಾನ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - ಕಾವೇರಿ ಜಲಾಶಯದಲ್ಲಿ ನೀರಿಲ್ಲ

ಪಕ್ಷ ಬಿಟ್ಟೋದವರನ್ನು ಮತ್ತೆ ಸೇರಿಸಿಕೊಂಡು ಬಿಜೆಪಿಯನ್ನು ಗಟ್ಟಿ ಮಾಡಬೇಕು. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Union Minister Shobha Karandlaje spoke at a press conference.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Aug 19, 2023, 5:59 PM IST

Updated : Aug 19, 2023, 6:48 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಚಿಕ್ಕಮಗಳೂರು:ಬಿಜೆಪಿ ಬಿಟ್ಟು ಹೋದವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮತ್ತೆ ಆಹ್ವಾನ ನೀಡಿದ್ದಾರೆ. ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಬಿಟ್ಟೋದವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಂಡು ಪಕ್ಷವನ್ನು ಗಟ್ಟಿ ಮಾಡಬೇಕು. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು. ದೇಶಕ್ಕೆ ಮತ್ತು ವಿಶ್ವಕ್ಕೆ ಮೋದಿ ಬೇಕಾಗಿದ್ದಾರೆ. ವಿಶ್ವದ ಹಲವು ದೇಶಗಳು ಭಾರತ ಮತ್ತು ಮೋದಿ ಅವರನ್ನು ನೋಡ್ತಿವೆ ಎಂದು ತಿಳಿಸಿದರು.

ಭಾರತವನ್ನು ಮತ್ತಷ್ಟು ಗಟ್ಟಿ ಮಾಡಲು ಎಲ್ಲರ ಸಹಕಾರ ಬೇಕು. ಬಿಜೆಪಿ ಸರ್ಕಾರ ರಚನೆ ಮಾಡಲು ಶಾಸಕರು, ಮುಖಂಡರು ನಮ್ಮ ಪಕ್ಷ ಸೇರಿದರು. ಅವರನ್ನು ಬಿಜೆಪಿ ಅತ್ಯಂತ ಗೌರವದಿಂದ ನಡೆಸಿಕೊಂಡಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ದೊಡ್ಡ ಖಾತೆ ಕೊಟ್ಟಿತ್ತು. ಅವರನ್ನು ದೊಡ್ಡ-ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿಯೂ ಮಾಡಿತ್ತು. ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಿಕೊಳ್ಳಲಾಗಿತ್ತು. ಇವತ್ತು ಸರ್ಕಾರ ಇಲ್ಲ, ಬಿಜೆಪಿ ಸೋತಿದೆ, ಆ ಸೋಲಿನಲ್ಲಿ ಎಲ್ಲರ ಪಾಲು ಇದೆ. ಮತ್ತೆ ಬಿಜೆಪಿಯನ್ನು ಕಟ್ಟಬೇಕು ಅನ್ನೋದು ನಮ್ಮ ಅಪೇಕ್ಷೆ. ನಮ್ಮ ಪಕ್ಷದ ತತ್ವ-ವಿಚಾರ ಒಪ್ಪಿ ಅವರು ಬಿಜೆಪಿ ಸೇರಿದ್ರು, ಅವರು ಇಲ್ಲೇ ಇರ್ತಾರೆಂಬ ವಿಶ್ವಾಸವಿದೆ. ಅಧಿಕಾರಕ್ಕಾಗಿ ಬಂದ್ರು ಅಧಿಕಾರ ಇಲ್ಲದಾಗ ಹೋದ್ರು ಎಂಬ ಕೆಟ್ಟ ಹೆಸರನ್ನು ಯಾರೂ ತೆಗೆದುಕೊಳ್ಳಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಅಧಿಕಾರ ಇದ್ದಾಗ ಎಲ್ಲವನ್ನೂ ಅನುಭವಿಸಿದ್ದೇವೆ, ಈಗ ಬಿಜೆಪಿಯನ್ನು ಗಟ್ಟಿ ಮಾಡಬೇಕಿದೆ. ಯಾರೇ ಪಕ್ಷ ಬಿಟ್ಟಿದ್ದರೂ ಮೋದಿಗಾಗಿ ಅವರಿಗೆ ಸ್ವಾಗತವಿದೆ. ಪಕ್ಷ ಬಿಟ್ಟೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ I.N.D.I.A ಹಾಗೂ ಹುಡುಕಿದರೆ ಯಾವ ಪಾರ್ಟಿಯಲ್ಲೂ ಸಿಗಲ್ಲ. ನಮ್ಮ ದೇಶದ ನಾಯಕನನ್ನು ಇಂದು ಪ್ರಪಂಚ ಒಪ್ಪುತ್ತಿದೆ. ಅವರನ್ನ ಪಿಎಂ ಮಾಡಲು ಪಾರ್ಟಿ ಬಿಟ್ಟವರು ವಾಪಸ್ ಬರಲಿ ಎಂದು ಕೇಂದ್ರ ಸಚಿವರು ವಿನಂತಿಸಿದರು.

ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಡುಗಡೆ: ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಕರಂದ್ಲಾಜೆ, I.N.D.I.A ನಲ್ಲಿ ಇದ್ದಾರೆಂಬ ಕಾರಣಕ್ಕೆ ಒತ್ತಡಕ್ಕೆ ನೀರು ಬಿಟ್ಟಿದ್ದಾರೆ. ರಾಜ್ಯದಲ್ಲಿ ಮಳೆ ಕಡಿಮೆ ಇದ್ದು, ಬಹಳ ಜಿಲ್ಲೆಗಳಲ್ಲಿ ಬರದ ವಾತಾವರಣವಿದೆ. ತಮಿಳುನಾಡು ಸರ್ಕಾರ ಹಾಗೂ ವ್ಯವಸ್ಥೆಗೆ ಮನವರಿಕೆ ಮಾಡಬೇಕಿತ್ತು. ನಮ್ಮ ರೈತರು, ಬೆಂಗಳೂರು ಜನಕ್ಕೆ ಕುಡಿಯೋಕು ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತೆ. ಈಗಾಗಲೇ ಬೆಂಗಳೂರು ಸಿಟಿಯಲ್ಲಿ ಬೇಕಾದಷ್ಟು ನೀರು ಬಿಡುತ್ತಿಲ್ಲ ಎಂದು ಆರೋಪಿಸಿದರು.

ವಿದ್ಯುತ್ ಇಲ್ಲ, ನೀರಿಲ್ಲ, ಮಳೆ ಇಲ್ಲ ಹೀಗೆ ಎಲ್ಲ ಕಾರಣದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಜನರಿಗೆ ಕುಡಿಯೋ ನೀರಿಗೂ ತತ್ವಾರ ಸ್ಥಿತಿ ನಿರ್ಮಾಣ ಅಗಲಿದೆ. ಸರ್ಕಾರ ಜನರ ಬಗ್ಗೆ ಯೋಚಿಸ್ತಿಲ್ಲ. ಅವರವರ ಒಳ ರಾಜಕೀಯದ ಬಗ್ಗೆ ಯೋಚಿಸ್ತಿದೆ. ಸರ್ಕಾರ ಅವರೊಳಗಿನ ಗೊಂದಲಕ್ಕಾಗಿ ಕರ್ನಾಟಕದ ಜನರನ್ನು ಬಲಿ ಕೊಡ್ತಿದೆ. ಕಾವೇರಿ ಜಲಾಶಯದಲ್ಲಿ ನೀರಿಲ್ಲ ಎಂದು ಮನವರಿಕೆ ಮಾಡಬೇಕಿತ್ತು. ಬೇಕಾದರೆ ತಂಡ ಕಳಿಸಿ ಪರಿಶೀಲನೆ ಮಾಡಿ ಅನ್ನೋ ಗಟ್ಟಿ ಧೈರ್ಯದ ಧ್ವನಿ ಸರ್ಕಾರದ ಬಳಿ ಇಲ್ಲ. ರಾಜ್ಯ ಸರ್ಕಾರ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದರು.

ಇದನ್ನೂಓದಿ:ಆಪರೇಷನ್​ ಹಸ್ತದ ಯಾವ ನಾಟಕವೂ ವರ್ಕೌಟ್ ಆಗಲ್ಲ: ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಲೇವಡಿ

Last Updated : Aug 19, 2023, 6:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.