ETV Bharat / state

ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನ... ಅಟ್ಟಾಡಿಸಿ ಹಿಡಿದ ಸ್ಥಳೀಯರು

ಬೈಕ್​ ಮೇಲೆ ಬಂದಿದ್ದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಎಗರಿಸಿ ಪರಾರಿಯಾಗಲು ಮುಂದಾಗಿದ್ದರು. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರನ್ನು ಸಚಿನ್ ಹಾಗೂ ಮೋಹನ್ ಎಂದು ಗುರುತಿಸಲಾಗಿದೆ.

thieves-tries-to-robbery-in-house-at-chikkamagalore
ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನಿಸಿದ ಖದೀಮರು
author img

By

Published : Feb 27, 2021, 4:10 PM IST

Updated : Feb 27, 2021, 10:57 PM IST

ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ. ಹಾಡಹಗಲೇ ಮನೆಗೆ ನುಗ್ಗಿದ ಇಬ್ಬರು ಮನೆಯವರಿಗೆ ಚಾಕು ತೋರಿಸಿ ಚಿನ್ನಾಭರಣ ಹಣ ದೋಚಿದ್ದಾರೆ. ಆದರೆ ಈ ವೇಳೆ ಅವರನ್ನು ಹಿಡಿಯಲು ಯತ್ನಿಸಿದವರ ಮೇಲೆ ಹಲ್ಲೆಗೆ ಮುಂದಾಗಿದ್ದು, ಕಳ್ಳರ ತಡೆಯಲು ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದ ಎಐಟಿ ಬೈಪಾಸ್ ರಸ್ತೆಯ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದು, ಸ್ಥಳೀಯರು ನಗರದ ರಸ್ತೆಯಲ್ಲೆಲ್ಲಾ ಓಡಾಡಿಸಿ ಹಿಡಿದಿದ್ದಾರೆ.

ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನಿಸಿದ ಖದೀಮರು...ಅಟ್ಟಾಡಿಸಿ ಹಿಡಿದ ಸ್ಥಳೀಯರು

ಬೈಕ್​ ಮೇಲೆ ಬಂದಿದ್ದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಎಗರಿಸಿ ಪರಾರಿಯಾಗಲು ಮುಂದಾಗಿದ್ದರು. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು,ಬಂಧಿತರನ್ನು ಸಚಿನ್ ಹಾಗೂ ಮೋಹನ್ ಎಂದು ಗುರುತಿಸಲಾಗಿದೆ.

ಇನ್ನು ಕಳ್ಳತನಕ್ಕೆ ಯತ್ನಸಿದ ಸಚಿನ್ ಎಂಬಾತ ಚಂದ್ರೇಗೌಡರ ಸಂಬಂಧಿ ಎನ್ನಲಾಗಿದ್ದು, ಆಸ್ತಿ ವಿವಾದದಲ್ಲಿ ಹಿನ್ನಡೆಯಾದ ಕಾರಣ ದ್ವೇಷ ತೀರಿಸಿಕೊಳ್ಳಲು ಈ ಕೃತ್ಯ ಎಸಗಲು ಮುಂದಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಒಡೆದ ಮನೆಯಾಗಿ ಮೂರು ಗುಂಪಾಗಿದೆ: ಡಿಸಿಎಂ ಗೋವಿಂದ ಕಾರಜೋಳ

Last Updated : Feb 27, 2021, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.